ವಿಜಯವಾಣಿ ಸುದ್ದಿಜಾಲ ಧಾರವಾಡ
ಇತ್ತೀಚೆಗೆ ನಡೆದ ರಾಷ್ಟ್ರೀಯ ಮಿಲಿಟರಿ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಇಲ್ಲಿನ ಭಾರತಿನಗರದ ಎಕ್ಸಲೆಂಟ್ ಕೋಚಿಂಗ್ ಕ್ಲಾಸಿಸ್ ವಿದ್ಯಾರ್ಥಿ ಅನಿಕೇತ ಅರ್ಜುನ ನೇಗಿನಾಳ ತೇರ್ಗಡೆಯಾಗಿ ಆಯ್ಕೆಯಾಗಿದ್ದಾನೆ. ಜಿಲ್ಲೆಯಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿ ಅರ್ಜುನ ಸಾಧನೆಗೆ ಸಂಸ್ಥೆ ನಿರ್ದೇಶಕ ಪ್ರವಿಣ ಗಿರಿಯಪ್ಪನವರ, ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.