ಕಾಸರಗೋಡು: ಕೋಯಿಕ್ಕೋಡಿನ ಕೋವೂರ್ ಕೃಷ್ಣನ್ ಪಿಳ್ಳೈ ಸ್ಮಾರಕ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಥರ್ವ ಬಿ.ಎಸ್ ಹಾಗೂ ಅಶ್ವಥಿ ಪಿ. ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಅಕ್ಟೋಬರ್ ತಿಂಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ನಡೆಯಲಿರುವ ರಾಷ್ಟಮಟ್ಟದ ಯೋಗಾಸನಾ ಸ್ಪರ್ಧೆಯಲ್ಲಿ ಕೇರಳ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. ಇಬ್ಬರೂ ಕಾಸರಗೋಡಿನ ಯೋಗ ಫಾರ್ ಕಿಡ್ಸ್ ಸಂಸ್ಥೆ ಮುಖ್ಯಶಿಕ್ಷಕಿ ತೇಜಕುಮಾರಿ ಅವರಿಂದ ತರಬೇತಿ ಪಡೆದುಕೊಂಡಿದ್ದಾರೆ.