ಜಿಲ್ಲೆ

ಸಾಗವಾನಿ ಕಟ್ಟಿಗೆ ವಶ, ಒಬ್ಬನ ಬಂಧನ

ಮುಂಡಗೋಡ: ಮನೆಯಲ್ಲಿ ಅಕ್ರಮವಾಗಿ ಸಾಗವಾನಿ ಮರದ ತುಂಡುಗಳನ್ನು ಸಂಗ್ರಹಿಸಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿ, ಕಟ್ಟಿಗೆ ವಶಕ್ಕೆ ಪಡೆದ ಘಟನೆ ಶನಿವಾರ ನಡೆದಿದೆ.

ಯಲ್ಲಾಪುರ ತಾಲೂಕಿನ ರಾಜೀವಾಡ ಗ್ರಾಮದ ಜಾನು ಕೊಂಡು ಪಾಟೀಲ ಬಂಧಿತ ಆರೋಪಿ. ಈತ ತಾಲೂಕಿನ ಚಿಪಗೇರಿ ಅರಣ್ಯದಲ್ಲಿ ಒಣಗಿದ್ದ 1.50.ಲಕ್ಷ ರೂ. ಮೌಲ್ಯದ ಸಾಗವಾನಿ ಮರವನ್ನು ಕಡಿದು ಆರು ತುಂಡು ಮಾಡಿ ಮನೆಯಲ್ಲಿ ಬಚ್ಚಿಟ್ಟಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಕಟ್ಟಿಗೆ ಹಾಗೂ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಕಾತೂರ ವಲಯ ಅರಣ್ಯಾಧಿಕಾರಿ ವೀರೇಶ, ಉಪ ವಲಯ ಅರಣ್ಯಾಧಿಕಾರಿಗಳಾದ ಮಂಜುನಾಥ ಆನಿಯವರ, ದೀಪಕ ಜಾಬುರೆ, ಅರಣ್ಯ ರಕ್ಷಕರಾದ ಲಕ್ಷ್ಮಣ ಉಗ್ಗನವರ, ಮಂಜುನಾಥ ಶಿವಣ್ಣನವರ ಕಾರ್ಯಾಚರಣೆಯಲ್ಲಿದ್ದರು.