ಅಕ್ರಮವಾಗಿ ಕಲ್ಲು ಸಾಗಣೆ ಮಾಡುತ್ತಿದ್ದ ಲಾರಿಗಳನ್ನು ವಶಕ್ಕೆ ಪಡೆದಿರುವುದು.  
ಜಿಲ್ಲೆ

ಅಕ್ರಮವಾಗಿ ಕಲ್ಲು ಸಾಗಿಸುತ್ತಿದ್ದ 5 ಲಾರಿಗಳ ವಶ

ಕೆ.ಆರ್.ಸಾಗರ: ಪರವಾನಗಿ ಇಲ್ಲದೆ ಅಕ್ರಮವಾಗಿ ಕಲ್ಲು ಸಾಗಣೆ ಮಾಡುತ್ತಿದ್ದ 5 ಲಾರಿ ಮತ್ತು ಕಂಪ್ರೆಸರ್ ಅನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ಕೃಷ್ಣರಾಜಸಾಗರ ಪೊಲೀಸರಿಗೆ ಒಪ್ಪಿಸಿದ್ದಾರೆ.


ಮಾಹಿತಿ ಆಧರಿಸಿ ಹಿರಿಯ ಭೂವಿಜ್ಞಾನಿ ನಾಗಮಧು ಪರಿಶೀಲನೆ ನಡೆಸುತ್ತಿದ್ದಾಗ ಅಕ್ರಮವಾಗಿ ಕಲ್ಲು ಸಾಗಣೆ ಮಾಡುತ್ತಿದ್ದ 5 ಲಾರಿಗಳು ಹಾಗೂ ಕಲ್ಲು ತೆಗೆಯುಲು ಬಳಸುತ್ತಿದ್ದ ಕಂಪ್ರೆಸರ್ ಅನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.