ಜಿಲ್ಲೆ

PHOTOS: ಮದುವೆ ಆಮಂತ್ರಣ ಪತ್ರದೊಳಗಿತ್ತು ಐದು ಕೋಟಿ ಮೌಲ್ಯದ ಮಾದಕ ವಸ್ತು!

ಬೆಂಗಳೂರು: ಮದುವೆ ಆಮಂತ್ರಣ, ಉಡುಪುಗಳನ್ನೆಲ್ಲ ಯಾರು ಪರಿಶೀಲಿಸುತ್ತಾರೆ. ವಿಮಾನ ನಿಲ್ದಾಣದಲ್ಲಿ ಸುಲಭವಾಗಿ ಪಾಸ್ ಆಗಿಬಿಡಬಹುದು ಎಂಬುದು ಅವರ ಲೆಕ್ಕಾಚಾರವಾಗಿತ್ತು. ಆದರೆ, ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿನ ತಪಾಸಣೆ ಬಿಗಿಯಾಗಿದ್ದು, ಮದುವೆ ಆಮಂತ್ರಣ, ಉಡುಪುಗಳನ್ನು ಕಳುಹಿಸಿದವರ ಲೆಕ್ಕಾಚಾರ ತಲೆಕೆಳಗಾಗಿತ್ತು.

ಬೆಂಗಳೂರಿನ ಏರ್​ ಕಾರ್ಗೋ ಕಾಂಪ್ಲೆಕ್ಸ್​ನ ಕೊರಿಯರ್ ಟರ್ಮಿನಲ್​ನಲ್ಲಿ ಅಧಿಕಾರಿಗಳು ಶುಕ್ರವಾರ (ಫೆ.21) ಎಕ್ಸ್​ಪೋರ್ಟ್ ಕನ್​​ಸೈನ್​ಮೆಂಟ್ ತಪಾಸಣೆಯನ್ನು ನಡೆಸಿದ ವೇಳೆ ಮದುವೆ ಆಮಂತ್ರಣ ಮತ್ತು ಜತೆಗಿರುವ ಉಡುಪುಗಳು ಸುಲಭವಾಗಿ ಹೋಗಲಿಲ್ಲ. ಸ್ಕ್ಯಾನಿಂಗ್ ವೇಳೆ ಅದೇನೋ ಪೌಡರ್ ಇರುವುದು ಪತ್ತೆಯಾಗಿತ್ತು. ಪೊಟ್ಟಣ ಪರಿಶೀಲಿಸಿದಾಗ 43 ಮದುವೆ ಆಮಂತ್ರಣಗಳು ಮತ್ತು ಕೆಲವು ಗಾರ್ಮೆಂಟ್ಸ್​ ಅದರಲ್ಲಿ ಇದ್ದವು.

ಆಮಂತ್ರಣ ಪತ್ರಗಳನ್ನು ಕಾರ್ಡ್​ಬೋರ್ಡ್​ ಶೀಟ್​ನಿಂದ ತಯಾರಿಸಿದ್ದು, ಮಡಿಚಬಹುದಾಗಿದ್ದವು. ಹೆಚ್ಚಿನ ತಪಾಸಣೆಗೆ ಅವುಗಳನ್ನು ಒಳಪಡಿಸಿದಾಗ, ಆ ಆಮಂತ್ರಣ ಪತ್ರದೊಳಗೆ ಪಾಲಿಥಿನ್ ಪೌಚ್​ಗಳಲ್ಲಿ ತುಂಬಿಸಿಟ್ಟ ಕ್ರಿಸ್ಟಲಿನ್ ಪೌಡರ್ ಪತ್ತೆಯಾಗಿದೆ. 43 ಆಮಂತ್ರಣ ಪತ್ರದೊಳಗೆ ಒಟ್ಟು 86 ಪೌಚ್​ಗಳು ಪತ್ತೆಯಾಗಿವೆ. ಈ ಪೌಡರನ್ನು ಎಫಿಡ್ರೈನ್ ಎಂದು ಹೇಳಲಾಗುತ್ತಿದ್ದು, ಇದು ಎನ್​ಡಿಪಿಎಸ್ ಕಾಯ್ದೆ ಪ್ರಕಾರ ನಿಷೇಧಿತವಾದವು.

ಈ ಸರಕು ಪೂರ್ತಿಯಾಗಿ ಮಧುರೈನ ಎಕ್ಸ್​ಪೋರ್ಟರ್​ ಒಬ್ಬರಿಗೆ ಸೇರಿದ್ದಾಗಿದ್ದು, ಅವರು ಆಸ್ಟ್ರೇಲಿಯಾಕ್ಕೆ ಇದನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದ್ದರು ಎಂಬ ಅಂಶ ಮೇಲ್ನೋಟಕ್ಕೆ ಸಾಬೀತಾಗಿದೆ. ಪತ್ತೆಯಾದ ಒಟ್ಟು ಪೌಡರ್​ನ ತೂಕ 5.049 ಕಿಲೋ ಇದ್ದು, ಇದರ ಮೌಲ್ಯ 5.05 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಕಸ್ಟಮ್ಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಳೆದ ಮೂರು ದಿನಗಳ ಅವಧಿಯಲ್ಲಿ ಇದು ಎಫಿಡ್ರೈನ್ ಕಳ್ಳಸಾಗಣೆಯ ಎರಡನೇ ಪ್ರಯತ್ನವಾಗಿತ್ತು. ಫೆ.18ರಂದು ಕೂಡ 5 ಕಿಲೋ ತೂಕದ ಪೌಡರನ್ನು ಆಸ್ಟ್ರೇಲಿಯಾಕ್ಕೆ ಕಳ್ಳಸಾಗಣೆ ಮಾಡುವ ಪ್ರಯತ್ನ ನಡೆದಿತ್ತು. ಅದು ಕೂಡ ಮಧುರೈನಿಂದಲೇ ಕೊರಿಯರ್ ಆಗಿತ್ತು.