ಸಹಸ್ರಲಿಂಗೇಶ್ವರ ದೇವಾಲಯದ ನಾಗ ಬನದಲ್ಲಿ ಅಭಿಷೇಕ ನಡೆಯಿತು. 
ಜಿಲ್ಲೆ

ಉಪ್ಪಿನಂಗಡಿಯಲ್ಲಿ ಸೀಯಾಳಾಭಿಷೇಕ

ಉಪ್ಪಿನಂಗಡಿ: ನಾಗರಪಂಚಮಿಯಂದು ಉಪ್ಪಿನಂಗಡಿಯ ವಿವಿಧೆಡೆಯ ನಾಗಬನಗಳಲ್ಲಿ ಶ್ರದ್ಧೆಯ ನಾಗಾರಾಧನೆ ಸಹಸ್ರಾರು ಭಕ್ತಾದಿಗಳ ಭಾಗಿದಾರಿಕೆಯೊಂದಿಗೆ ನಡೆಯಿತು.

ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ನಾಗಬನದಲ್ಲಿ ಭಾರಿ ಸಂಖ್ಯೆಯ ಭಕ್ತಾದಿಗಳಿಂದ ಶ್ರೀ ನಾಗದೇವರಿಗೆ ಸೀಯಾಳಾಭಿಷೇಕ, ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಆಶ್ಲೇಷ ಬಲಿ ಪೂಜೆ ನೆರವೇರಿತು.

ಇಲ್ಲಿನ ಶ್ರೀ ಲಕ್ಷ್ಮೀವೆಂಕಟರಮಣ ದೇವಾಲಯದ ವನಭೋಜನದಲ್ಲಿರುವ ನಾಗಬನದಲ್ಲಿಯೂ ನೂರಾರು ಭಕ್ತರ ಉಪಸ್ಥಿತಿಯಲ್ಲಿ ನಾಗದೇವರಿಗೆ ವಿವಿಧ ಅಭಿಷೇಕಾಧಿ ಪೂಜೆಗಳು ನೆರವೇರಿತು.

ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ವನಭೋಜನದ ನಾಗಬನದಲ್ಲಿ ಅಭಿಷೇಕ ಜರುಗಿತು.

ಪದಾಳ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲೂ ಭಾರಿ ಸಂಖ್ಯೆಯ ಭಕ್ತರಿಂದ ನಾಗದೇವರ ಪೂಜೆ ನೆರವೇರಿದವು. ಹಲವೆಡೆ ಕುಟುಂಬ, ತರವಾಡು ಮನೆತನಗಳ ನಾಗ ಸಾನ್ನಿಧ್ಯದಲ್ಲಿ ನಾಗಾರಾಧನೆ ಕುಟುಂಬ ಸದಸ್ಯರ ಭಾಗಿದಾರಿಕೆಯಲ್ಲಿ ನಡೆಯಿತು.