ಶಿಕ್ಷಕರ ಜತೆ ಭತ್ತ ನಾಟಿ ಮಾಡುತ್ತಿರುವ ಭದ್ರಾವತಿ ಕಡದಕಟ್ಟೆ ನವಚೇತನ ಶಾಲೆ ಮಕ್ಕಳು. 
ಜಿಲ್ಲೆ

ಸೀನ ಸೆಟ್ಟರು ನಮ್ಮ ಟೀಚರ್…

Shivamogga - Desk - Praveena Kumar S

ಭದ್ರಾವತಿ: ಏಳನೇ ತರಗತಿಯ ಕನ್ನಡ ಪಠ್ಯದಲ್ಲಿನ ‘ಸೀನ ಸೆಟ್ಟರು ನಮ್ಮ ಟೀಚರ್’ ಎಂಬ ಗದ್ಯದಲ್ಲಿ ಭತ್ತದ ಸಸಿ ಕೀಳುವುದು ಹಾಗೂ ನಾಟಿ ಮಾಡುವ ಬಗೆಯನ್ನು ಪ್ರಕಟಿಸಿದ್ದಾರೆ. ಆ ಗದ್ಯವನ್ನು ಹೇಳಿಕೊಟ್ಟಿರುವ ಶಿಕ್ಷಕರು ಮಕ್ಕಳನ್ನು ಭತ್ತದ ಗದ್ದೆಗೇ ಕರೆದುಕೊಂಡು ಹೋಗಿ ಪ್ರಾಯೋಗಿಕವಾಗಿಯೆ ತೋರಿಸಿಕೊಟ್ಟರು. ಕಡದಕಟ್ಟೆ ನವಚೇತನ ಅನುದಾನಿತ ಕನ್ನಡ ಶಾಲೆಯ ಶಿಕ್ಷಕರಾದ ಸಿ.ಎಚ್.ನಾಗೇಂದ್ರಪ್ಪ ಹಾಗೂ ಶಿಕ್ಷಕಿ ಕೆ.ಮಮತಾ 7ನೇ ತರಗತಿಯ ಮಕ್ಕಳನ್ನು ಶನಿವಾರ ಶಾಲೆಯ ಹತ್ತಿರವಿದ್ದ ಜಮೀನಿಗೆ ಕರೆದುಕೊಂಡು ಹೋಗಿ ಭತ್ತದ ಸಸಿ ಕೀಳಿಸಿ ಅವರಿಂದಲೇ ನಾಟಿ ಮಾಡಿಸಿದರು. ಆ ಮೂಲಕ ಅನ್ನದಾತನ ಶ್ರಮವನ್ನು ತೋರಿಸಿಕೊಟ್ಟರು. ಭತ್ತ ನಾಟಿ ಮಾಡಿದ ಖುಷಿಯಲ್ಲಿ ವಿದ್ಯಾರ್ಥಿಗಳು ಸಂಭ್ರಮಿಸಿದರು.