ಸೇಡAನ ನ್ಯಾಯಾಲಯದ ಆವರಣದಲ್ಲಿ ಗುರುವಾರ ಪದವೀಧರರ ಕ್ಷೇತ್ರದ ಮತದಾರ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಸಹಾಯಕ ಆಯುಕ್ತ ಆಶಪ್ಪ ಪೂಜಾರಿ, ತಹಸೀಲ್ದಾರ್ ಶ್ರೀಯಾಂಕ ಧನಶ್ರೀ, ಉಪ ತಹಸೀಲ್ದಾರ್ ಶರಣಗೌಡ, ವಕೀಲರಾದ ರಾಜೇಂದ್ರ ಮುನ್ನೂರ, ವಸಂತ ಪೂಜಾರಿ, ಸತೀಶ ಪಾಟೀಲ್ ಇತರರಿದ್ದರು.  
ಜಿಲ್ಲೆ

ಪದವೀಧರರೇ ನೋಂದಣಿ ಮಾಡಿಸಿ

ರಾಜು ಯಮಕನಮರಡಿ

ಸೇಡಂ: ಕೆಲ ತಿಂಗಳುಗಳ ನಂತರ ನಡೆಯಲಿರುವ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಮತದಾರರ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭಿಸಲಾಗಿದ್ದು, ಪದವೀಧರರು ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ಸೇರ್ಪಡೆಗೊಳಿಸಬೇಕು ಎಂದು ಸಹಾಯಕ ಆಯುಕ್ತ ಆಶಪ್ಪ ಪೂಜಾರಿ ಮನವಿ ಮಾಡಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಮತಪಟ್ಟಿಯಲ್ಲಿ ಹೆಸರು ಸೇರ್ಪಡೆಯ ಕುರಿತು ಗುರುವಾರ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದ ಅವರು ಮಾತನಾಡಿದರು.

ಕಳೆದ ಒಂದು ತಿಂಗಳಿನಿಂದ ನೋಂದಣಿ ಕೆಲಸ ಮಾಡಲಾಗುತ್ತಿದೆ. ಆದರೆ ಪದವೀಧರರು ಹೆಚ್ಚಿನ ನೋಂದಣಿಗೆ ಮುಂದಾಗುತ್ತಿಲ್ಲ. ಆದ್ದರಿಂದ ಪದವಿ ಕಾಲೇಜು, ವಕೀಲರ ಸಂಘದ ಕಚೇರಿ, ಸಾರ್ವಜನಿಕ ಸ್ಥಳಗಳಲ್ಲಿ ಹೀಗೆ ಅನೇಕ ಕಡೆ ಕಂದಾಯ ಇಲಾಖೆಯ ಚುನಾವಣೆ ಶಾಖೆಯಿಂದ ವಿಶೇಷ ಅಭಿಯಾನ ನಡೆಸುವ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ತಹಸೀಲ್ದಾರ್ ಶ್ರೀಯಾಂಕ ಧನಶ್ರೀ ಮಾತನಾಡಿ, ನವೆಂಬರ್ ೬ರಂದು ಹೆಸರು ಸೇರಿಸಲು ಕೊನೆಯ ದಿನವಾಗಿದೆ. ಅರ್ಹ ಪದವೀಧರರು ಹೆಸರು ಸೇರಿಸಲು ನಮೂನೆ-೧೮ರಲ್ಲಿ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು.

ಉಪ ತಹಸೀಲ್ದಾರ್ ಶರಣಗೌಡ, ವಕೀಲರಾದ ರಾಜೇಂದ್ರ ಮುನ್ನೂರ, ಸತೀಶ ಪಾಟೀಲ್, ವಸಂತ ಪೂಜಾರಿ, ಶಿವಾನಂದಸ್ವಾಮಿ, ಅಶೋಕ ಮದನಾ, ಲಾಲಹ್ಮದ್ ಹೊಸಳ್ಳಿಕರ್, ಅಂಕೀತ ಜೋಶಿ, ಮಲ್ಲಿಕಾರ್ಜುನ ನೀಲಂಗಿ, ಮೋಹನ ಇತರರಿದ್ದರು.