ಜಿಲ್ಲೆ

ಸೇಡಂಗೆ ಗಾಂಜಾ ಸಾಗಿಸುತ್ತಿದ್ದ ಇಬ್ಬರ ಅರೆಸ್ಟ್​

ಕೃಷ್ಣ ಕುಲಕರ್ಣಿ

ಚಿಂಚೋಳಿ: ಬೈಕ್‌ನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸ್ಥಳೀಯ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಸೇಡಂ ತಾಲೂಕಿನ ಕೋಡ್ಲಾದ ಮೀರಜ್ (೨೭), ಕರೀಮ್ (೫೭) ಬಂಧಿತರು. ೩೫೦ ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಬೈಕ್‌ನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯಂತೆ ಪಿಎಸ್‌ಐ ಹಣಮಂತ ಬಂಕಲಗಿ ನೇತೃತ್ವದಲ್ಲಿ ಸಿಬ್ಬಂದಿ ಬೊಮ್ಮನಳ್ಳಿ ಸಮೀಪ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಇವರು ಬೀದರ್‌ನಿಂದ ಬೈಕ್‌ನಲ್ಲಿ ಕೋಡ್ಲಾಕ್ಕೆ ಗಾಂಜಾ ತೆಗೆದುಕೊಂಡು ಹೊರಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.