ಕನಕಗಿರಿಯ ಕೆಪಿಎಸ್ ಶಾಲೆಯಲ್ಲಿ ಭದ್ರತಾ ಕೊಠಡಿಯನ್ನು ಕೊಪ್ಪಳ ಲೋಕಸಭಾ ಕ್ಷೇತ್ರದ ವೀಕ್ಷಕರಾದ ಹೇಮಾ ಪುಷ್ಪಾ ಶರ್ಮಾ ವೀಕ್ಷಿಸಿದರು. ಕನಕಗಿರಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಮಲ್ಲಪ್ಪ ತೊದಲಬಾಗಿ ತಹಸೀಲ್ದಾರ್ ವಿಶ್ವನಾಥ ಮುರುಡಿ ಇತರರಿದ್ದರು. 
ಜಿಲ್ಲೆ

ಭದ್ರತಾ ಕೊಠಡಿಗಳ ಪರಿಶೀಲನೆ

ರುದ್ರಪ್ಪ ವಾಲಿ

ಕನಕಗಿರಿ: ಕೊಪ್ಪಳ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಹೇಮಾ ಪುಷ್ಪಾ ಶರ್ಮಾ ಅವರು
ವಿಧಾನಸಭಾ ವ್ಯಾಪ್ತಿಯಲ್ಲಿ ಕೈಗೊಳ್ಳಲಾದ ಸಿದ್ಧತೆಯನ್ನು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇಲ್ಲಿನ ಸಹಾಯಕ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಕನಕಗಿರಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಮಲ್ಲಪ್ಪ ತೊದಲಬಾಗಿ ಸೇರಿ ನಾನಾ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದರು. ಚುನಾವಣೆಗೆ ಕೈಗೊಳ್ಳಲಾದ ಸಿದ್ಧತೆ ಬಗ್ಗೆ ಮಾಹಿತಿ ಪಡೆದುಕೊಂಡರು.

ನಂತರ ನಾನಾ ಮತಗಟ್ಟೆ ಕೇಂದ್ರಗಳನ್ನು ವೀಕ್ಷಿಸಿದ ಅವರು, ಇಲ್ಲಿನ ಕೆಪಿಎಸ್‌ನಲ್ಲಿನ ಭದ್ರತಾ ಕೊಠಡಿಗಳನ್ನು ಪರಿಶೀಲಿಸಿದರು. ನಂತರ ಹುಲಿಹೈದರ್ ಚೆಕ್‌ಪೋಸ್ಟ್‌ಗೆ ತೆರಳಿ ವಾಹನ ತಪಾಸಣೆಯ ಕುರಿತು ಕರ್ತವ್ಯದಲ್ಲಿದ್ದ ಸಿಬ್ಬಂದಿಯನ್ನು ವಿಚಾರಿಸಿದರು.

ಚುನಾವಣಾ ಕಾರ್ಯ ಪರಿಶೀಲನೆ ನಂತರ ಐತಿಹಾಸಿಕ ಪ್ರಸಿದ್ಧ ಶ್ರೀ ಕನಕಾಚಲ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ತಹಸೀಲ್ದಾರ್ ವಿಶ್ವನಾಥ ಮುರುಡಿ, ಕನಕಗಿರಿ, ಕಾರಟಗಿ ತಾಪಂ ಇಒಗಳಾದ ಎಲ್. ವೀರೇಂದ್ರಕುಮಾರ್, ಲಕ್ಷ್ಮೀದೇವಿ, ಕಾರಟಗಿ ಪುರಸಭೆ ಮುಖ್ಯಾಧಿಕಾರಿ ಸುರೇಶ, ಕನಕಗಿರಿ ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಪಿಐ ಎಂ.ಡಿ ಫೈಜುಲ್ಲಾ ಇತರರಿದ್ದರು.
ಚುನಾವಣಾ ಕಾರ್ಯ ಪರಿಶೀಲನೆ ನಂತರ ಐತಿಹಾಸಿಕ ಪ್ರಸಿದ್ಧ ಶ್ರೀ ಕನಕಾಚಲ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.