ಹಗರಿಬೊಮ್ಮನಹಳ್ಳಿ: ಕಾಶ್ಮೀರ ಪಹಲ್ಗಾಮ್‌ದಲ್ಲಿ ಉಗ್ರರಿಂದ ಬಲಿಯಾದ ಪ್ರವಾಸಿಗರಿಗೆ ಪಟ್ಟಣದ ಬಸವೇಶ್ವರರ ವೃತ್ತದಲ್ಲಿ ಶುಕ್ರವಾರ ತಾಲೂಕು ಬ್ಲಾಕ್ ಕಾಂಗ್ರೆಸ್‌ನಿಂದ ಮೇಣದ ದೀಪ ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಇದನ್ನೂ ಓದಿ:ಪ್ರವಾಸಿಗರ ಮೇಲಿನ ಗುಂಡಿನ ದಾಳಿ ಖಂಡಿಸಿ ಪ್ರತಿಭಟನೆ
ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಕೋರಿ ಗೋಣಿಬಸಪ್ಪ ಮಾತನಾಡಿ, ಕೇಂದ್ರ ಸರ್ಕಾರದಿಂದ ಭದ್ರತೆಯ ಲೋಪವಾಗಿದೆ. ಆದ್ದರಿಂದ ಇಂಥ ಕೃತ್ಯಗಳು ನಡೆಯುತ್ತಿವೆ. ಕೂಡಲೆ ದಾಳಿಕೋರರನ್ನು ಪತ್ತೆಮಾಡಿ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ಎಐಸಿಸಿ ವಕ್ತಾರ ಪತ್ರೇಶ ಹಿರೇಮಠ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಗುರುಬಸವರಾಜ ಸೊನ್ನದ್, ಸದಸ್ಯ ಎಸ್.ಎ.ಸಂತೋಷ, ಕಾಂಗ್ರೆಸ್ ಮಹಿಳಾ ಜಿಲ್ಲಾಧ್ಯಕ್ಷೆ ಭಾನಮ್ಮ, ಪ್ರಮುಖರಾದ ಡಿಶ್ ಮಂಜುನಾಥ, ಆಟೋ ರಾಜಕ್, ಯಮನೂರ ಸಾಬ್, ಸರೆಗಾರ ಹುಚ್ಚಪ್ಪ, ರೋಗಾಣಿ ಪ್ರಕಾಶ, ಕುರುಬರ ವೆಂಕಟೇಶ, ಮಂಜುನಾಥ, ತ್ಯಾವಣಿಗಿ ಕೊಟ್ರೇಶ, ಡಿಶ್ ಬಾಳಪ್ಪ ಇತರರಿದ್ದರು.