ಜಿಲ್ಲೆ

ಮದ್ಯ ಸೇವಿಸಿದ ಸೆಕ್ಯೂರಿಟಿ ಗಾರ್ಡ್ ಶೌಚಗೃಹದಲ್ಲಿ ಬಿದ್ದು ಸಾವು

Haveri - Kariyappa Aralikatti

ಬ್ಯಾಡಗಿ: ವಿಪರೀತ ಮದ್ಯ ಸೇವಿಸಿದ ಅಮಲಿನಲ್ಲಿ ಸೆಕ್ಯೂರಿಟಿ ಗಾರ್ಡ್‌ವೊಬ್ಬ ಶೌಚಗೃಹದಲ್ಲಿ ಬಿದ್ದು ಮೃತಪಟ್ಟ ಘಟನೆ ಪಟ್ಟಣದ ಖಾಸಗಿ ಕೋಲ್ಡ್ ಸ್ಟೋರೇಜ್‌ನಲ್ಲಿ ಬುಧವಾರ ಸಂಭವಿಸಿದೆ.
ನೇಪಾಳದ ಮದನಸಿಂಗ್ ಪಿರಾಮುಲ್ಲಾ (55) ಮೃತ ವ್ಯಕ್ತಿ.
ಈತ ಇಲ್ಲಿಯ ಖಾಸಗಿ ಕೋಲ್ಡ್ ಸ್ಟೋರೇಜ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಮಂಗಳವಾರ ರಾತ್ರಿ ವಿಪರೀತ ಮದ್ಯ ಸೇವಿಸಿ ಬಂದಿದ್ದು, ಮಧ್ಯೆರಾತ್ರಿ ಶೌಚಗೃಹಕ್ಕೆ ತೆರಳಿದಾಗ ಅಲ್ಲಿಯೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.