ಸೋಮವಾರಪೇಟೆ ಪುಟ್ಟಪ್ಪ ವೃತ್ತದಲ್ಲಿ ಹಿಂದು ಹಿತರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು. ಮೇದಪ್ಪ, ಬೋಜೇಗೌಡ, ಮಹೇಶ್, ದೀಪಕ್ ಇದ್ದರು.  
ಜಿಲ್ಲೆ

ಬಾಯಿ ಬಿಡದ ಜಾತ್ಯತೀತರು

ಅಭಿನಯ್ ಎಚ್.ಎಂ

ಸೋಮವಾರಪೇಟೆ: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಹಿಂದು ಹಿತರಕ್ಷಣಾ ಸಮಿತಿ ವತಿಯಿಂದ ಪಟ್ಟಣದ ಸೋಮವಾರ ಪ್ರತಿಭಟನೆ ನಡೆಯಿತು.

ಹಿಂದುಪರ ಸಂಘಟನೆಗಳ ಪ್ರಮುಖರು ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಘಟನೆಯನ್ನು ಖಂಡಿಸಿದರು. ಸಮಿತಿಯ ಪ್ರಮುಖರಾದ ಬೋಜೇಗೌಡ ಮಾತನಾಡಿ, ಬಾಂಗ್ಲಾ, ಪಾಕಿಸ್ತಾನದಲ್ಲಿ ಹಿಂದುಗಳ ಹತ್ಯಾಕಾಂಡ ನಡೆಯುತ್ತಿದೆ. ಮುಂದೆ ಭಾರತಕ್ಕೂ ಈ ಪರಿಸ್ಥಿತಿ ಬರಬಾರದು ಎಂದರೆ ಹಿಂದುಗಳು ಒಗ್ಗಟ್ಟಾಗಬೇಕು. ಬಾಂಗ್ಲಾಕ್ಕೆ ಬೆಂಬಲ ನೀಡುವ ರಾಜಕಾರಣಿಗಳನ್ನು ಕ್ಷಮಿಸಬಾರದು. ಹಿಂದುಗಳ ಹತ್ಯಾಕಾಂಡ ನಡೆಯುತ್ತಿದ್ದರೂ ಜಾತ್ಯತೀತರು ಎನಿಸಿಕೊಂಡವರು ಬಾಯಿ ಬಿಡದಿರುವುದು ಆಶ್ಚರ್ಯ ತಂದಿದೆ ಎಂದು ಅರೋಪಿಸಿದರು.

ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಹಿಂದುಪರ ಸಂಘಟನೆಗಳ ಪ್ರಮುಖರಾದ ಮಹೇಶ್ ತಿಮ್ಮಯ್ಯ, ದರ್ಶನ್ ಜೋಯಪ್ಪ, ದೀಪಕ್, ಶುಭಾಷ್ ತಿಮ್ಮಯ್ಯ, ಉಮೇಶ್, ಮನುಕುಮಾರ್ ರೈ ಇದ್ದರು.