ಪಿ.ಟಿ.ಭರತ್ 
ಜಿಲ್ಲೆ

ಪಿ.ಟಿ.ಭರತ್‌ಗೆ ಎರಡನೇ ಸಲ ಅವಕಾಶ

Gangavati - Desk - Veeresh S Ullagaddi

ಹರಪನಹಳ್ಳಿ: ತಾಲೂಕಿನ ಲಕ್ಷ್ಮೀಪುರ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯಿತು.

ಒಟ್ಟು 16 ಸದಸ್ಯ ಬಲವಿರುವ ಗ್ರಾಪಂನಲ್ಲಿ ಒಬ್ಬರು ರಾಜೀನಾಮೆ ನೀಡಿದ್ದು, 15 ಸದಸ್ಯರಲ್ಲಿ ಒಬ್ಬರು ಗೈರಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ಪಿ.ಟಿ.ಭರತ್ ಮತ್ತು ಹೇಮರಾಜನಾಯ್ಕ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಪೀರಾಬಾಯಿ ಹನುಮಂತನಾಯ್ಕ ಮಾತ್ರ ನಾಮಪತ್ರ ಸಲ್ಲಿಸಿದ್ದರು.

ಪಿ.ಟಿ.ಭರತ್ 11 ಮತ ಪಡೆಯುವ ಮೂಲಕ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣೆ ಅಧಿಕಾರಿಯಾಗಿ ಜಯರಾಜ ಕರ್ತವ್ಯ ನಿರ್ವಹಿಸಿದರು. ಪಿಡಿಒ ಬೋರಯ್ಯ, ಮುಖಂಡರಾದ ಪಿ.ಟಿ.ಅವಿನಾಶ, ರವಿನಾಯ್ಕ, ಉಮೇಶನಾಯ್ಕ, ಪವನಕುಮಾರ ಇತರರಿದ್ದರು.