ಸಾರಿಗೆ ನೌಕರರ ಮುಷ್ಕರದಿಂದ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ರಾಯಚೂರಿನ ಕೇಂದ್ರ ಬಸ್ ನಿಲ್ದಾಣ ಬಸ್ ಸಂಚಾರವಿಲ್ಲದೆ ಶನಿವಾರ ಬಿಕೋ ಎನ್ನುತ್ತಿರುವುದು. 
ಜಿಲ್ಲೆ

ಎರಡನೇ ದಿನವೂ ರಸ್ತೆಗಿಳಿಯದ ಸಾರಿಗೆ ಬಸ್, ಪ್ರಯಾಣಿಕರ ಪರದಾಟ

Raichur

ರಾಯಚೂರು: ಸರ್ಕಾರಿ ನೌಕರರು ಎಂದು ಪರಿಗಣಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಹಿನ್ನೆಲೆಯಲ್ಲಿ ಶನಿವಾರವೂ ಬಸ್‌ಗಳು ರಸ್ತೆಗಿಳಿಯದ ಕಾರಣ ಪ್ರಯಾಣಿಕರು ಪರದಾಡುವಂತಾಯಿತು.

ಬಸ್ ಸಂಚಾರವಿಲ್ಲದ ಕಾರಣ ಜಿಲ್ಲೆಯಲ್ಲಿನ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದು, ಬಸ್ ಸಂಚಾರ ಆರಂಭವಾಗಬಹುದು ಎಂದು ನಿಲ್ದಾಣಕ್ಕೆ ಬಂದ ಪ್ರಯಾಣಿಕರು ನಿರಾಸೆಯಿಂದ ಖಾಸಗಿ ವಾಹನಗಳ ಮೂಲಕ ತಾವು ಹೋಗಬೇಕಾದ ಸ್ಥಳಗಳಿಗೆ ತೆರಳಿದರು.

ಬಸ್ ಸಂಚಾರ ಇಲ್ಲದಿರುವುದನ್ನು ದುರುಪಯೋಗ ಪಡಿಸಿಕೊಳ್ಳುವ ಮೂಲಕ ಜೀಪ್, ಆಟೋ ಮತ್ತು ಖಾಸಗಿ ವಾಹನಗಳ ಚಾಲಕರು ಎರಡ್ಮೂರು ಪಟ್ಟು ಹಣ ಪಡೆಯುವ ಮೂಲಕ ಪ್ರಯಾಣಿಕರ ಸುಲಿಗೆ ನಡೆಸಿದರು. ಜೀಪ್‌ಗಳಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುವುದು ಕಂಡು ಬರುತ್ತಿತ್ತು.