ಜಿಲ್ಲೆ

ಸೀಟು ಹಿಡಿಯಲು ಕೊಟ್ಟ ಬ್ಯಾಗ್​ನಲ್ಲಿದ್ದ ಚಿನ್ನಾಭರಣ ಕಳ್ಳತನ

Haveri - Kariyappa Aralikatti

ಹಾವೇರಿ: ಬಸ್​ನಲ್ಲಿ ಸೀಟು ಹಿಡಿಯಲು ಎಂದು ಅಪರಿಚಿತ ವ್ಯಕ್ತಿಗೆ ಬ್ಯಾಗ್​ ಕೊಟ್ಟ ಮಹಿಳೆಯ 1.10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ತಾಲೂಕಿನ ಹೊಸರಿತ್ತಿ ಬಸ್​ ನಿಲ್ದಾಣದಲ್ಲಿ ನಡೆದಿದೆ.

ಸವಣೂರ ತಾಲೂಕಿನ ಹತ್ತಿಮತ್ತೂರ ಗ್ರಾಮದ ಜಯಮ್ಮ ಬಾಸಿಂಗಪ್ಪ ಲಮಾಣಿ (43) ಎಂಬುವರ ಚಿನ್ನಾಭರಣ ದೋಚಿರುವುದು.

ಇವರು ಹೊಸರಿತ್ತಿಯಿಂದ ರಾಣೆಬೆನ್ನೂರಿಗೆ ಬರುವ ಸಲುವಾಗಿ ಬಸ್​ ಹತ್ತುವಾಗ ಬಸ್​ನಲ್ಲಿದ್ದ ಅಪರಿಚಿತ ವ್ಯಕ್ತಿಯ ಕೈಗೆ ಬ್ಯಾಗ್​ ನೀಡಿ ಸೀಟು ಹಿಡಿಯಲು ಹೇಳಿದ್ದಾರೆ. ವ್ಯಕ್ತಿಯು ಬ್ಯಾಗ್​ನಲ್ಲಿದ್ದ ಚಿನ್ನಾಭರಣ ತೆಗೆದುಕೊಂಡು ಬ್ಯಾಗ್​ ಬಿಟ್ಟು ಇಳಿದು ಹೋಗಿದ್ದಾನೆ. ಈ ಕುರಿತು ಗುತ್ತಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.