ಜಿಲ್ಲೆ

ಶಾಂಭವಿ ಹೊಳೆಗೆ ಜಿಗಿದಾತನಿಗಾಗಿ ಶೋಧ

ಮೂಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಬಪ್ಪನಾಡು ಸೇತುವೆಯಿಂದ ಪುರುಷನೋರ್ವ ಶಾಂಭವಿ ನದಿಗೆ ಹಾರಿದ್ದು, ಸ್ಥಳೀಯರು ಆತನ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

ನದಿಗೆ ಹಾರಿದಾತನನ್ನು ಕೆ.ಎಸ್.ರಾವ್ ನಗರ ಲಿಂಗಪ್ಪಯ್ಯ ಕಾಡು ಕಟ್ಟದಂಗಡಿ ನಿವಾಸಿ ಶೀನ ಮೇಸ್ತ್ರಿ(65) ಎಂದು ಗುರುತಿಸಲಾಗಿದೆ.

ಶುಕ್ರವಾರ ಮಧ್ಯಾಹ್ನ ಸೇತುವೆ ಬದಿಯಲ್ಲಿ ಪಾದರಕ್ಷೆ ಹಾಗೂ ಶಾಲು ಇರಿಸಿದ್ದು, ಸ್ಥಳೀಯರು ನೋಡುತ್ತಿದ್ದಂತೆ ಶಾಂಭವಿ ನದಿಗೆ ಹಾರಿದ್ದಾರೆ. ಸ್ಥಳಕ್ಕೆ ಮೂಲ್ಕಿ ಪೊಲೀಸರು, ಅಗ್ನಿಶಾಮಕದಳ, ನುರಿತ ಈಜುಗಾರರ ತಂಡ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದೆ.

ಕಳೆದ ವರ್ಷವೂ ಆತ್ಮಹತ್ಯೆಗೆ ಯತ್ನ

ವರ್ಷದ ಹಿಂದೆಯೂ ಶೀನ ಮೇಸ್ತ್ರಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಇದೇ ಸ್ಥಳದಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದಾಗ ಸ್ಥಳೀಯ ಸಾವಾಜಿಕ ಕಾರ್ಯಕರ್ತ ಭೀವಾಶಂಕರ್ ಮತ್ತಿತರರು ಬಚಾವ್ ವಾಡಿ ಬುದ್ಧಿವಾತು ಹೇಳಿದ್ದರು.