ಮುರ್ಡೇಶ್ವರ: ಕೇರಳದ ಅಲೆಪ್ಪಿಯ ಹವ್ಯಾಸಿ ಸಮುದ್ರ ಚಿಪ್ಪು(sea shell) ಸಂಗ್ರಾಹಕ ಫೀರೋಜ್ ಅಹಮದ್ ಅವರು ಸಂಗ್ರಹಿಸಿದ ವಿವಿಧ ಸ್ವರೂಪದ ಮೃದ್ವಂಗಿ ಚಿಪ್ಪು ಗಳು ಅಚ್ಚರಿ ಹುಟ್ಟಿಸುವಂತಿದ್ದವು.
ವಿಶ್ವ ಮೀನುಗಾರಿಕೆ ದಿನಾಚರಣೆ ಅಂಗವಾಗಿ ಮುರ್ಡೇಶ್ವರದ ಆರ್‌ಎನ್‌ಎಸ್ ಗಾಲ್ಫ್ ರೆಸಾರ್ಟ್ನಲ್ಲಿ ಆಯೋಜಿಸಿದ್ದ ಮತ್ಸ್ಯ ಮೇಳವನ್ನೊಮ್ಮೆ ಸುತ್ತಾಡಿ ಬಂದರೆ ಸಮುದ್ರದ ಆಳವನ್ನು ಸುತ್ತಾಡಿ ಬಂದ ಅನುಭವ ಉಂಟಾಯಿತು. ಗುರುವಾರದಿಂದ ಆಯೋಜಿಸಿರುವ ಮತ್ಸ ಮೇಳವು ನ.23 ರಂದು ಕೊನೆಗೊಳ್ಳಲಿದೆ. ಸಾವಿರಾರು ಜನರು ಮೇಳಕ್ಕೆ ಆಗಮಿಸಿ ಪ್ರದರ್ಶನಗಳನ್ನು ವೀಕ್ಷಿಸಿದ್ದಾರೆ. ಅಚ್ಚರಿ ಪಟ್ಟಿದ್ದಾರೆ.
ಮೇಳದಲ್ಲಿ ಫೀರೋಜ್ ಅಹಮದ್ ಅವರ ಬಳಿ ವಿಶ್ವದ ಏಳು ಸಾಗರಗಳ ಆಳಗಳಲ್ಲಿ ಬೆಳೆಯುವ 300 ಪ್ರಭೇದಗಳ ಸಾವಿರಕ್ಕೂ ಅಧಿಕ ಚಿಪ್ಪು ಗಳ ಸಂಗ್ರಹವಿದ್ದು, ಮುರ್ಡೇಶ್ವರದಲ್ಲಿ ಕೆಲವನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಅತಿ ಸಣ್ಣ ಎರಡು ಇಂಚಿನ ಚಿಪ್ಪಿನಿಂದ ಹಿಡಿದು, ಎರಡು ಅಡಿ ವ್ಯಾಸದ ಬೃಹತ್ ಶಂಕದವರೆಗೆ, ಚಿತ್ರ ವಿಚಿತ್ರ ಆಕಾರದ, ಆಕರ್ಷಕವಾದ ಚಿಪ್ಪುಗಳನ್ನು, ಅಳಿವಿನ ಅಂಚಿನಲ್ಲಿರುವ ಅತಿ ಅಪರೂಪದ ಸ್ಪೌಂಡಿಲೇಸ್, ಆರ್ಕ್, ಸನ್‌ಸೆಟ್, ಸ್ಪಂಡಲ್ ಮುಂತಾದ ಚಿಪು÷್ಪಗಳನ್ನು ಅವರ ತಮ್ಮ ಸೀ ಗಿಫ್ಟ್ ಎಂಬ ಮತ್ಸ÷್ಯ ಮೇಳದಲ್ಲಿ ಪ್ರದರ್ಶಿಸಿ ಜಾಗೃತಿ ಮೂಡಿಸಿದರು.
ಕಾರವಾರ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿರುವ ಅಪರೂಪದ ತಿಮಿಂಗಿಲದ ಕೋರೆ, ದೊಡ್ಡ ಮೀನುಗಳ ಅಸ್ತಿ ಪಂಜರ ಮುಂತಾದವುಗಳು ಗಮನ ಸೆಳೆದವು. ಅಲ್ಲದೇ ಸುರಂಗದೊಳಗಡೆ ಹಾಗೂ ಎಲ್ಲ ಕಡೆ ಅಕ್ವೇರಿಯಂಗಳಲ್ಲಿ ಇರಿಸಿದ ಸಮುದ ಬಣ್ಣದ ಮೀನುಗಳ ಚಿತ್ತಾರೆ ಅತ್ಯಾಕರ್ಷಕವಾಗಿತ್ತು. ಅಲ್ಲದೇ ವಿವಿಧ ಇಲಾಖೆಗಳ ಮಳಿಗೆಗಳು ಗಮನ ಸೆಳೆದವು.
ಮತ್ಸ್ಯ ಮೇಳದಲ್ಲಿ ಎಲ್ಲರಿಗೂ ಮೀನೂಟದ ವ್ಯವಸ್ಥೆ ಮಾಡಲಾಗಿತ್ತು. ಮೀನಿನ ಫ್ರೈ, ಮೀನಿನ ಸಾರು ಮುಂತಾದವನ್ನು ಸುಮಾರು 6 ಸಾವಿರಕ್ಕೂ ಅಧಿಕ ಜನರು ಗುರುವಾರ ರಾತ್ರಿ ಸವಿದು ಖುಷಿಪಟ್ಟರು. ಶುಕ್ರವಾರ ಮಧ್ಯಾಹ್ನವೂ ಊಟ, ತಿಂಡಿ ವ್ಯವಸ್ಥೆ ಮಾಡಲಾಗಿತ್ತು.
ಸಮುದ್ರ ಚಿಪ್ಪು ಸಂಗ್ರಾಹಕಫಿರೋಜ್ ಅಹಮದ್ಸಮುದ್ರ ಇದ್ದರೆ ಮಾತ್ರ ನಾವೆಲ್ಲ ಇರುತ್ತವೇ. ಏಕೆಂದರೆ ಅಲ್ಲಿಂದಲೇ ನಮಗೆ ಸಾಕಷ್ಟು ಆಮ್ಲಜನಕ ಸಿಗುತ್ತದೆ. ಆದರೆ, ವಿವಿಧ ರೀತಿಯ ಮಾಲಿನ್ಯಗಳಿಂದ ಇಂದು ಮೀನಿಗೆ, ಮೃದ್ವಂಗಿಗಳ ಸಂತತಿಗೆ ಹಾನಿಯಾಗುತ್ತವೆ. ಅದನ್ನು ತಿಳಿಸುವ ಸಲುವಾಗಿ ದೇಶದ ವಿವಿಧೆಡೆ ಸಮುದ್ರದಾಳದ ಜೀವಿಗಳ ಜಾಗೃತಿ ಪ್ರದರ್ಶನ ಕೈಗೊಳ್ಳುತ್ತೇನೆ. ಇದನ್ನೂ ಓದಿ: https://www.vijayavani.net/manganabavu-case-rises-to-145-dc-lakshmi-priya-declares-three-day-holiday-for-mundagoda-residential-school 145ಕ್ಕೇರಿದ ಮಂಗನಬಾವು ಪ್ರಕರಣ, ಮುಂಡಗೋಡ ವಸತಿ ಶಾಲೆಗೆ ಮೂರು ದಿನ ರಜೆ ಘೊಷಿಸಿದ ಡಿಸಿ ಲಕ್ಷ್ಮೀಪ್ರಿಯಾ https://www.facebook.com/share/p/1PuA1X7sUi/