ವಿಜಯವಾಣಿ ಸುದ್ದಿಜಾಲ ಉಡುಪಿ
ಕಳೆದ ಮಳೆಗಾಲದ ಸಂದರ್ಭದಲ್ಲಿ ತೀವ್ರ ಕಡಲ್ಕೊರೆತ ಉಂಟಾಗಿದ್ದ ಗುಜ್ಜರಬೆಟ್ಟು ಭಾಗದ ಪ್ರದೇಶಗಳಿಗೆ ಮೀನುಗಾರಿಕಾ ಮತ್ತು ಬಂದರು ಇಲಾಖೆಯ ಮೂಲಕ 1 ಕೋಟಿ ರೂ. ಅನುದಾನ ಒದಗಿಸಲಾಗಿದ್ದು, ಪ್ರತಿಬಂಧಕ ಕಾಮಗಾರಿ ನಡೆಯಲಿದೆ. ಮುಂದಿನ ದಿನಗಳಲ್ಲಿ ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರ ಒದಗಿಸಲು ವಿಶೇಷ ಮುತುವರ್ಜಿ ವಹಿಸಲಾಗುವುದು ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಭರವಸೆ ನೀಡಿದರು.
ಕೆಮ್ಮಣ್ಣು ಗ್ರಾಪಂ ಅಧ್ಯೆ ಕುಸುಮಾ ರವೀಂದ್ರ, ಉಪಾಧ್ಯಕ್ಷ ಅರುಣ, ಲಕ್ಷ್ಮೀನಾರಾಯಣ ಭಜನಾ ಮಂದಿರದ ಅಧ್ಯಕ್ಷ ರತ್ನಾಕರ ಸಾಲ್ಯಾನ್, ಗುರು ರಾಘವೇಂದ್ರ ಭಜನಾ ಮಂದಿರದ ಅಧ್ಯಕ್ಷ ಸುಂದರ ಗುಜ್ಜರಬೆಟ್ಟು, ಕೆಮ್ಮಣ್ಣು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸತೀಶ ಶೆಟ್ಟಿ, ಗ್ರಾಪಂ ಸದಸ್ಯರಾದ ಪ್ರಶಾಂತ ಕೆಮ್ಮಣ್ಣು, ಪುರಂದರ ಕುಂದರ್ ಗುಜ್ಜರಬೆಟ್ಟು, ಸಂಧ್ಯಾ ಕೆಮ್ಮಣ್ಣು, ಧೀರೇಂದ್ರ ನಾಯ್ಕ ಬೆಂಗ್ರೆ, ಲೋಕೇಶ ಸಾಲ್ಯಾನ್, ಪ್ರತಿಭಾ ಭಾಸ್ಕರ, ವತ್ಸಲಾ, ಸ್ಥಳೀಯ ಮುಖಂಡರಾದ ಪ್ರಶಾಂತ ಕಾಂಚನ್, ಮಾಲತಿ ಶ್ರೀಯಾನ್, ಮುತ್ತಪ್ಪ ಮೇಸ್ತ್ರಿ, ರವೀಂದ್ರ ಶ್ರೀಯಾನ್, ವಿಶುಕುಮಾರ್ ಗುಜ್ಜರಬೆಟ್ಟು, ರವಿ ಸನಿಲ್ ಹೂಡೆ, ದಿನೇಶ ಮೇಸ್ತ್ರಿ, ಗಂಗಾಧರ ಪಾಲನ್, ಶೇಖರ ಶ್ರೀಯಾನ್, ರಾಘು ಕುಂದರ್, ಲತೇಶ ಗುಜ್ಜರಬೆಟ್ಟು, ಪುರುಷೋತ್ತಮ ಗುಜ್ಜರಬೆಟ್ಟು, ರವಿ ಕುಂದರ್ ಗುಜ್ಜರಬೆಟ್ಟು ಇತರರು ಉಪಸ್ಥಿತರಿದ್ದರು.