ಜಿಲ್ಲೆ

ಕಡಲ ಕೊರೆತ ಪ್ರದೇಶಕ್ಕೆ ಜಲಸಾರಿಗೆ ಮಂಡಳಿ ಸಿಇಒ ಭೇಟಿ

Mangaluru - Hariprasad Rai


ಮಂಗಳೂರು : ಕಡಲ ಕೊರೆತ ಬಾಧಿತ ಪ್ರದೇಶಗಳಾದ ಉಳ್ಳಾಲ ತಾಲೂಕಿನ ಮೊಗವೀರಪಟ್ಣ ಬಟ್ಟಪ್ಪಾಡಿ , ಉಚ್ಚಿಲ ಹಾಗೂ ಸೀಗ್ರೌಂಡ್ ಪ್ರದೇಶಗಳಿಗೆ ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯರಾಮ್ ರಾಯ್‌ಪುರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೊಗವೀರಪಟ್ಣ ಪ್ರದೇಶದಲ್ಲಿ ಎಡಿಬಿ ಯೋಜನೆಯಡಿ ಬರ್ಮ್‌ಗಳನ್ನು ನಿರ್ಮಾಣ ಮಾಡಲಾಗಿದ್ದು, ಅಬ್ಬರದ ಅಲೆಗಳಿಂದ ತಡೆಗೋಡೆ ಕುಸಿದಿದೆ. ಹಾಗಾಗಿ ಬರ್ಮ್‌ಗಳ ಮಧ್ಯೆ ತಡೆಗೋಡೆಯನ್ನು ನಿರ್ಮಾಣ ಮಾಡುವಂತೆ ಸ್ಥಳೀಯರು ಈ ಸಂದರ್ಭ ಮನವಿ ಮಾಡಿದರು.
ಮುಕ್ಕಚ್ಚೇರಿ ಪ್ರದೇಶದಲ್ಲೂ ಎಡಿಬಿ ಯೋಜನೆಯಡಿಯಲ್ಲಿ ಟೇಟ್ರಾ ಪೋಡ್‌ಗಳು ಕಾಂಕ್ರೀಟಿನಿಂದ ಮಾಡಿರುವ ತಡೆಗೋಡೆ ಕುಸಿದಿದ್ದು ಅದಷ್ಟು ಬೇಗ ಮತ್ತೆ ತಡೆಗೋಡೆ ನಿರ್ಮಿಸುವಂತೆ ಸ್ಥಳೀಯರು ಮನವಿ ಮಾಡಿದರು.
ಸೋಮೇಶ್ವರ ಪುರಸಭಾ ವ್ಯಾಪ್ತಿಯ ಬಟ್ಟಪ್ಪಾಡಿ ಸಮುದ್ರ ಕೊರತೆಯಿಂದ ರಸ್ತೆ ಸಂಪರ್ಕ ಮತ್ತಷ್ಟು ಕಡಿತಗೊಂಡಿದ್ದು, 4-5 ಮನೆಗಳು ಅಪಾಯದ ಅಂಚಿನಲ್ಲಿದೆ. ಈ ಬಗ್ಗೆ ಮಾಹಿತಿ ಪಡೆದ ಜಯರಾಮ್ ರಾಯ್‌ಪುರ ಅವರು ಸ್ಥಳೀಯ ಅಧಿಕಾರಿಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದರು.
ಕಾರವಾರ ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಇಂಜಿನಿಯರ್ ಪ್ರಮೀತ್ ಬಿ.ಎಸ್, ಮಂಗಳೂರು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜೇಶ್ ಕುಮಾರ್ ಎ., ಮನೋಹರ್ ಆಚಾರ್ಯ ವಿ.ಕೆ, ಬ್ಲಾಕ್ ಬ್ರಿಕ್ಸ್ ಸಲಹೆಗಾರ ಸಮೀಪ್ ಜೈನ್ ಉಪಸ್ಥಿತರಿದ್ದರು.