ಜಿಲ್ಲೆ

ಶಾಸಕ ಸ್ಥಾನದಿಂದ ಬಂಡೀಸಿದ್ದೇಗೌಡರ ವಜಾಗೊಳಿಸಿ...

ಉಡುಪಿಯಲ್ಲಿ ಹನೀಫ್​ ಮೂಳೂರು ಆಗ್ರಹ

ಮುಸ್ಲಿಂ ವಿರೋಧಿ ಹೇಳಿಕೆ ಖಂಡಿಸಿ ಎಸ್​ಡಿಪಿಐ ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಶ್ರೀರಂಗಪಟ್ಟಣದ ಕಾಂಗ್ರೆಸ್​ ಶಾಸಕ ಬಂಡೀಸಿದ್ದೇಗೌಡ ಅವರ ಮುಸ್ಲಿಂ ವಿರೋಧಿ ಹೇಳಿಕೆ ನೀಡಿದ್ದು, ಅವರನ್ನು ಶಾಸಕ ಸ್ಥಾನದಿಂದ ಕೂಡಲೇ ವಜಾ ಮಾಡಬೇಕು. ಕಾಂಗ್ರೆಸ್​ ಸರ್ಕಾರ ಮುಸ್ಲೀಮರ ವೋಟ್​ ಪಡೆದು ನಿರಂತರವಾಗಿ ಮುಸ್ಲೀಮರ ವಿರುದ್ಧವೇ ಕೆಲಸ ಮಾಡಿದೆ. ಅಧಿಕಾರಕ್ಕೆ ಬಂದರೆ ಹಿಜಾಬ್​ ನಿಷೇಧ ಹಿಂಪಡೆಯುತ್ತೇವೆ ಎಂದಿದ್ದ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿ 2 ವರ್ಷವಾದರೂ ಅದರ ಬಗ್ಗೆ ಮಾತೆತ್ತುತ್ತಿಲ್ಲ ಎಂದು ಎಸ್​ಡಿಪಿಐ ಉಡುಪಿ ಜಿಲ್ಲಾ ಉಪಾಧ್ಯಕ್ಷ ಹನೀಫ್​ ಮೂಳೂರು ಆಕ್ರೋಶ ವ್ಯಕ್ತಪಡಿಸಿದರು.

ಮುಸ್ಲಿಂ ವಿರೋಧಿಯಾದ ಶಾಸಕ ಬಂಡೀಸಿದ್ದೇಗೌಡ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ಸೋಶಿಯಲ್​ ಡೆಮಾಕ್ರಟಿಕ್​ ಪಾರ್ಟಿ ಆಫ್​ ಇಂಡಿಯಾ (ಎಸ್​ಡಿಪಿಐ) ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಅಜ್ಜರಕಾಡುವಿನಲ್ಲಿರುವ ಹುತಾತ್ಮರ ಸ್ಮಾರಕದ ಬಳಿ ಜೂನ್​ 24ರಂದು ಸಂಜೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಎಸ್​ಡಿಪಿಐ ಉಡುಪಿ ಕ್ಷೇತ್ರ ಸಮಿತಿ ಉಪಾಧ್ಯಕ್ಷ ರಹೀಂ ಆದಿ ಉಡುಪಿ ಮಾತನಾಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಶುದ್ದೀನ್​, ಉಡುಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಅಶ್ರಫ್​ ಬಾವ ವಿಮೆನ್​, ಇಂಡಿಯಾ ಮೂವ್ಮೆಂಟ್​ ಜಿಲ್ಲಾಧ್ಯಕ್ಷೆ ನಾಝಿಯಾ ನಸ್ರುಲ್ಲ ಹಾಗೂ ಮಹಿಳಾ ಪದಾಧಿಕಾರಿಗಳು ಉಪಸ್ಥಿತರಿದ್ದರು.