ಜಿಲ್ಲೆ

ಎನ್‌ಐಎ ದಾಳಿಯನ್ನು ಖಂಡಿಸಿ ಎಸ್‌ಡಿಪಿಐ, ಪಿಎಫ್‌ಐ ಪ್ರತಿಭಟನೆ

reportermys

ಮಡಿಕೇರಿ: ದೇಶದ ವಿವಿಧೆಡೆ ಎಸ್‌ಡಿಪಿಐ, ಪಿಎಫ್‌ಐ ಕಚೇರಿ ಹಾಗೂ ಸಂಘಟನೆಯ ಪ್ರಮುಖರ ಮನೆ ಮೇಲೆ ಎನ್‌ಐಎ ದಾಳಿಯನ್ನು ಖಂಡಿಸಿ ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಗಳ ನೇತೃತ್ವದಲ್ಲಿ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿತು.


ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಎಸ್‌ಡಿಪಿಐ ಪ್ರಮುಖರಾದ ಅಮಿನ್ ಮೊಹಿಸಿನ್, ಸರ್ಕಾರ ಮತ್ತು ಆರ್‌ಎಸ್‌ಎಸ್ ವಿರುದ್ಧ ಮಾತನಾಡುವವರ ಮೇಲೆ ಎನ್‌ಐಎ ಹಾಗೂ ಇಡಿ ದಾಳಿ ನಡೆಸಲಾಗುತ್ತಿದೆ. ಎಲ್ಲವೂ ರಾಜಕೀಯ ಪ್ರೇರಿತವಾಗಿದೆ. ಸರ್ಕಾರದ ಲೋಪಗಳನ್ನು ಪ್ರಶ್ನೆ ಮಾಡದಂತೆ ಕೇಂದ್ರ ಸರ್ಕಾರ ತಡೆಯುತ್ತಿದೆ. ಎಸ್‌ಡಿಪಿಐ, ಪಿಎಫ್‌ಐ ಸೇರಿದಂತೆ ವಿವಿಧ ಸಂಘಟನೆಗಳ ಮೇಲೆ ದಾಳಿ ನಡೆಸಿದರೂ ಯಾವುದೇ ಅಧಿಕೃತ ಆಧಾರ ಲಭ್ಯವಾಗದೆ ಸರ್ಕಾರದ ಏಜೆನ್ಸಿಗಳು ಹತಾಶ ಪರಿಸ್ಥಿತಿಯಲ್ಲಿದೆ ಎಂದು ಟೀಕಿಸಿದರು.


ಪ್ರತಿಭಟನೆಯಲ್ಲಿ ಪಿಎಫ್‌ಐ ಅಧ್ಯಕ್ಷ ಶೌಕತ್ ಆಲಿ, ಮಡಿಕೇರಿ ನಗರಾಧ್ಯಕ್ಷ ರಿಯಾಜ್, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಕ್ರಿಯೇಟಿವ್ ಖಲೀಲ್, ನಗರಾಧ್ಯಕ್ಷ ರಿಜ್ವಾನ್, ನಗರ ಉಪಾಧ್ಯಕ್ಷ ಮೈಕಲ್ ವೇಗಸ್, ನಗರಸಭಾ ಎಸ್‌ಡಿಪಿಐ ಸದಸ್ಯರಾದ ಮನ್ಸೂರ್, ಬಷೀರ್ ಮತ್ತಿತರರು ಇದ್ದರು.