ಬೆಳ್ತಂಗಡಿ: ಪ್ರಾಚೀನ ಮನೆ, ಮಠ-ಮಂದಿರಗಳಲ್ಲಿರುವ ಅಮೂಲ್ಯ ಹಸ್ತಪ್ರತಿಗಳನ್ನು ಸಂಗ್ರಹಿಸಿ, ಶುಚಿಗೊಳಿಸಿ, ಅದಕ್ಕೆ ತೈಲ ನೀಡಿ ಸಂರಕ್ಷಿಸುವ ವಿಶೇಷ ಕಾರ್ಯ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ಮಾಡಲಾಗುತ್ತಿದೆ ಎಂದು ಎಸ್‌ಡಿಎಂ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನ ನಿರ್ದೇಶಕ ಡಾ.ವಿಘ್ನರಾಜ ಎಸ್.ಆರ್. ಹೇಳಿದರು.
ಉಜಿರೆ ಎಸ್‌ಡಿಎಂ ಕಾಲೇಜು ಕನ್ನಡ ವಿಭಾಗ ವಿದ್ಯಾರ್ಥಿಗಳು ಕೇಂದ್ರಕ್ಕೆ ಭೇಟಿ ನೀಡಿ ಸಂಗ್ರಹವನ್ನು ವೀಕ್ಷಿಸಿ ಮಾಹಿತಿ ಕಲೆ ಹಾಕಿ ಮಾತನಾಡಿದರು.
ಪ್ರಾಚೀನ ಪರಂಪರೆಯಲ್ಲಿ ಜ್ಞಾನ ಮೌಖಿಕವಾಗಿ ಕಂಠಪಾಠದ ಮೂಲಕ ಪ್ರಸಾರವಾಗುತ್ತಿತ್ತು. ಮುಂದೆ ಹಸ್ತಪ್ರತಿಗಳ ಮೂಲಕ ಅವುಗಳ ಸಂಗ್ರಹ, ಸಂರಕ್ಷಣೆಯಾಯಿತು. ಬರವಣಿಗೆ ಪರಿಕರಗಳಾದ ಚಿನ್ನ, ಬೆಳ್ಳಿ, ತಾಮ್ರ, ಭೋಜಪತ್ರ ಶಿಲಾಶಾಸನ ಮೊದಲಾದವುಗಳನ್ನು ವೀಕ್ಷಿಸಿದರು. ಸ್ವಾತಂತ್ರೃ ಪೂರ್ವದಲ್ಲಿ ಪ್ರಕಟವಾಗುತ್ತಿದ್ದ ವಾರ್ತಾಪತ್ರಿಕೆ, ಖ್ಯಾತ ಸಾಹಿತಿಗಳಾದ ಶಿವರಾಮ ಕಾರಂತ, ರಂ.ಶ್ರೀಮುಗಳಿ ಮೊದಲಾದವರ ಕೈಬರಹ, ಹಸ್ತಾಕ್ಷರ ವೀಕ್ಷಿಸಿದರು. ಕನ್ನಡ ವಿಭಾಗ ಉಪನ್ಯಾಸಕರಾದ ಎಂ.ಪಿ.ಶ್ರೀನಾಥ್, ಭವ್ಯಶ್ರೀ ಉಪಸ್ಥಿತರಿದ್ದರು.