ಜಿಲ್ಲೆ

ವಿದ್ಯಾರ್ಥಿಗಳು ಸೃಜನಶೀಲತೆ ರೂಢಿಸಿಕೊಳ್ಳಲಿ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ವಿದ್ಯಾರ್ಥಿಗಳು ಸೃಜನಶೀಲತೆಯನ್ನು ರೂಢಿಸಿಕೊಳ್ಳಬೇಕು. ಆರೋಗ್ಯ ವೃತ್ತಿಪರರು ರೋಗಿಗಳನ್ನು ನೋಡಿಕೊಳ್ಳಲು ಉತ್ತಮ ಮನಸ್ಸಿನಿಂದ ಕೆಲಸ ಮಾಡಬೇಕು ಎಂದು ಎಸ್‌ಡಿಎಂ ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಪದ್ಮಲತಾ ನಿರಂಜನ್ ಹೇಳಿದರು.

ನಗರದ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ಅಲೈಡ್ ಹೆಲ್ತ್ ಸೈನ್ಸಸ್ ವಿಭಾಗದಿಂದ ಮಂಗಳವಾರ ಆಯೋಜಿಸಿದ್ದ ಪರ್ವ- 2025 ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜ್ಞಾನ ಮತ್ತು ನವೀನ ಕೌಶಲಗಳನ್ನು ನವೀಕರಿಸುತ್ತಿರಬೇಕು. ಬುದ್ಧಿವಂತ ವ್ಯಕ್ತಿಯಾಗುವುದಕ್ಕಿಂತ ಜ್ಞಾನವುಳ್ಳ ವ್ಯಕ್ತಿಯಾಗುವುದು ಹೆಚ್ಚು ಮುಖ್ಯ ಎಂದರು.

ವೈದ್ಯಕೀಯ ಕಾಲೇಜಿನ ಪ್ರಾಚಾರ್ಯೆ ಡಾ. ರತ್ನಮಾಲಾ ದೇಸಾಯಿ ಮಾತನಾಡಿದರು. ವೈದ್ಯಕೀಯ ಅಧೀಕ್ಷಕ ಡಾ. ಕಿರಣ್ ಹೆಗ್ಡೆ, ಅಲೈಡ್ ಹೆಲ್ತ್ ಸೈನ್ಸಸ್‌ನ ಸಂಯೋಜಕ ಡಾ. ವಿದ್ಯಾ ಪಾಟೀಲ, ಇತರರಿದ್ದರು. ಸೂರಜ್ ಮತ್ತು ಎಲ್ಹಾಮ್ ಖಾನ್ ನಿರೂಪಿಸಿದರು. ಆಂಜೆಲ್ ಬ್ಲಿಸ್ಸಿ ವಂದಿಸಿದರು.