ಉಡುಪಿ: ಹತ್ತನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಜೂ.21 ರಂದು ಪರ್ಯಾಯ ಶ್ರೀ ಪುತ್ತಿಗೆ ಮಠ ಮತ್ತು ಪರೀಕ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ' ಸೌಖ್ಯವನ' ಸಹಯೋಗದೊಂದಿಗೆ ಯೋಗೇಶ್ವರ ಕೃಷ್ಣನೆಡೆಗೆ ಯೋಗ ನಡಿಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ.ಎಸ್.ಸೀತಾರಾಮ ತೋಳ್ಪಾಡಿತ್ತಾಯ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಗ್ಗೆ 6.30ಕ್ಕೆ ಉಡುಪಿ ಕ್ಲಾಕ್ಟವರ್ ಸಮೀಪ ಶಾಸಕ ಯಶ್ಪಾಲ್ ಸುವರ್ಣ ನಡಿಗೆಗೆ ಚಾಲನೆ ನೀಡಲಿದ್ದಾರೆ. ಜಿಲ್ಲಾ ಎಸ್ಪಿ ಡಾ. ಅರುಣ್, ಸೌಖ್ಯವನ ವೈದ್ಯಾಧಿಕಾರಿ ಡಾ. ಗೋಪಾಲ ಪೂಜಾರಿ ಉಪಸ್ಥಿತಿಯಲ್ಲಿ 300 ಯೋಗ ಪಟುಗಳೊಂದಿಗೆ ಜಾಥಾ ಕ್ಲಾಕ್ ಟವರ್, ಡಯಾನ್ ಸರ್ಕಲ್ ಮೂಲಕ ಕೃಷ್ಣಮಠದ ರಥಬೀದಿಯಲ್ಲಿ ಸಾಗಿ ಗೀತಾಮಂದಿರವನ್ನು ತಲುಪಲಿದೆ ಎಂದರು.
ಬೆಳಗ್ಗೆ 7 ಗಂಟೆಗೆಗ ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತಿರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಆದರ್ಶ ಆಸ್ಪತ್ರೆಯ ವೈದ್ಯಕಿಯ ಅಧೀಕ್ಷಕ ಡಾ. ಜಿ.ಎಸ್.ಚಂದ್ರಶೇಖರ್ ಪಾಲ್ಗೊಳ್ಳಲಿದ್ದಾರೆ ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸೌಖ್ಯವನದ ಮುಖ್ಯ ವೈದ್ಯಾಧಿಕಾರಿ ಡಾ. ಗೋಪಾಲ್ ಪೂಜಾರಿ, ವೈದ್ಯರಾದ ಡಾ. ಶೋಭಿತ್ ಶೆಟ್ಟಿ, ಡಾ. ಪೂಜಾ ಜಿ., ವ್ಯವಸ್ಥಾಪಕ ಪ್ರವಿಣ್ ಕುಮಾರ್ ಉಪಸ್ಥಿತರಿದ್ದರು.