ರಾಜ್ಯಮಟ್ಟದ ಮಹಿಳಾ ಕಬಡ್ಡಿ ಪಂದ್ಯಾಟದಲ್ಲಿ ವಿನ್ನರ್ ಆದ ಉಜಿರೆ ಎಸ್‌ಡಿಎಂ ನ್ಯಾಚುರೋಪಥಿ ತಂಡ. 
ಜಿಲ್ಲೆ

ಎಸ್‌ಡಿಎಂ ನ್ಯಾಚುರೋಪಥಿ ವಿನ್ನರ್: ಮಹಿಳಾ ಕಬಡ್ಡಿ ಪಂದ್ಯಾಟ

ಬೆಳ್ತಂಗಡಿ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು ಹಾಗೂ ಆಳ್ವಾಸ್ ಕಾಲೇಜ್ ಆಫ್ ನ್ಯಾಚುರೋಪತಿ ಮೂಡುಬಿದಿರೆ ಆಯೋಜಿಸಿದ ರಾಜ್ಯಮಟ್ಟದ ಮಹಿಳಾ ಕಬಡ್ಡಿ ಪಂದ್ಯಾಟದಲ್ಲಿ, ಉಜಿರೆಯ ಎಸ್‌ಡಿಎಂ ನ್ಯಾಚುರೋಪತಿ ಕಾಲೇಜು ತಂಡಚಾಂಪಿಯನ್ ಆಗಿ ಹೊರಹೊಮ್ಮಿದೆ.

ಸೆಮಿಫೈನಲ್ ಪಂದ್ಯಾಟದಲ್ಲಿ ಮೂಡುಬಿದಿರೆ ಆಳ್ವಾಸ್ ನ್ಯಾಚುರೋಪಥಿ ತಂಡವನ್ನು 27-18ರಿಂದ ಮಣಿಸಿ, ಫೈನಲ್ ಪಂದ್ಯಾಟದಲ್ಲಿ ಸಜ್ಜಲ ಶ್ರೀ ನರ್ಸಿಂಗ್ ಕಾಲೇಜ್ ಬೆಳಗಾವಿ ತಂಡವನ್ನು 24-11ರಿಂದ ಸೋಲಿಸಿ ವಿನ್ನರ್ ಆಯಿತು.

ಬೆಸ್ಟ್ ರೈಡರ್ ಆಗಿ ಉಜಿರೆಯ ನ್ಯಾಚುರೋಪಥಿ ತಂಡದ ಮಾನಸಾ ಹಾಗೂ ಬೆಸ್ಟ್ ಕ್ಯಾಚರ್ ಆಗಿ ಪ್ರಗತಿ ಆಯ್ಕೆಯಾದರು. ಇವರಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಧರ್ಮೇಂದ್ರ ಕುಮಾರ್ ತರಬೇತಿ ನೀಡಿದ್ದಾರೆ.