ಜಿಲ್ಲೆ

ವೈದ್ಯರೊಂದಿಗೆ ಸಂವಾದ ಕಾರ್ಯಕ್ರಮ

ಸೌಮ್ಯ ಆರ್

ಬೆಳ್ತಂಗಡಿ: ಆರೋಗ್ಯದ ಕಡೆ ಗಮನಹರಿಸಿ. ಗೂಗಲ್ ವೈದ್ಯ ಹಾಗೂ ಗೂಗಲ್ ರೋಗಿ ಆಗಬೇಡಿ ಎಂದು ಉಜಿರೆ ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆರ್ಥೋಪೆಡಿಷನ್ ಡಾ.ಎಚ್ ಶತಾನಂದ ಪ್ರಸಾದ್ ರಾವ್ ಹೇಳಿದರು.

ಉಜಿರೆ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ರೋಟರಿ ಕ್ಲಬ್ ಹಾಗೂ ಶಾಲೆ ಇಂಟರಾಕ್ಟ್ ಕ್ಲಬ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವೈದ್ಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಮುಖ್ಯಶಿಕ್ಷಕ ಮನ್ಮೋಹನ್ ನಾಯ್ಕ ಕೆ.ಜಿ.ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ರೋಟರಿ ಕ್ಲಬ್‌ನ ಕಾರ್ಯದರ್ಶಿ ಸಂದೇಶ್ ರಾವ್ ಉಪಸ್ಥಿತರಿದ್ದರು. ಶಿಕ್ಷಕಿ ಕಲ್ಯಾಣಿ ರಾವ್ ಕಾರ್ಯಕ್ರಮ ಸಂಯೋಜಿಸಿದರು. ವಿದ್ಯಾರ್ಥಿಗಳಾದ ಇಶಿತಾ ಸ್ವಾಗತಿಸಿ, ಸೋಹನ್ ನಿರೂಪಿಸಿ, ಕುನಾಲ್ ವಂದಿಸಿದರು.