ಜಿಲ್ಲೆ

ಎಸ್‌ಡಿಎಂ ಇಂಜಿನಿಯರಿ೦ಗ್ ಕಾಲೇಜಿನ ಪದವಿ ಪ್ರದಾನ ಸಮಾರಂಭ

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಎಸ್‌ಡಿಎಂ ಇಂಜಿನಿಯರಿ0ಗ್ ಕಾಲೇಜಿನ 15ನೇ ಪದವಿ ಪ್ರದಾನ ಸಮಾರಂಭವನ್ನು ಸೆ. 27ರಂದು ಬೆಳಗ್ಗೆ 10.30ಕ್ಕೆ ಕಾಲೇಜಿನ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಪ್ರಾಚಾರ್ಯ ಡಾ. ರಮೇಶ ಚಕ್ರಸಾಲಿ ಹೇಳಿದರು.

ಕಾಲೇಜಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 582 ಯುಜಿ, 17 ಪಿಜಿ ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರ ಸ್ವೀಕರಿಸುವರು. ವಿವಿಧ ವಿಭಾಗಗಳಲ್ಲಿ ಅಗ್ರಸ್ಥಾನ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ದತ್ತಿ ಬಹುಮಾನ ನೀಡಲಾಗುವುದು. ಕಾಲೇಜು ಹಂತದಲ್ಲಿ ಪ್ರಶಸ್ತಿಗೆ ಪ್ರತಿ ವಿಭಾಗದಿಂದ 3 ಅಗ್ರ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುವುದು. ಕಾಲೇಜಿನ ಕೆಮಿಕಲ್ ಇಂಜಿನಿಯರಿAಗ್ ವಿಭಾಗದ 9.99 ಸಿಜಿಪಿಎ ಪಡೆದ ಕೆ.ಎನ್. ಬಿಂದು ಅವರಿಗೆ ಸಂಸ್ಥೆಯ ಅಧ್ಯಕ್ಷ`ಡಾ. ಡಿ. ವೀರೇಂದ್ರ ಹೆಗ್ಗಡೆ' ಚಿನ್ನದ ಪದಕ ನೀಡಲಾಗುವುದು. ವಿಟಿಯು ಮತ್ತು ಇತರ ವಿಶ್ವವಿದ್ಯಾಲಯಗಳಿಂದ ಪಿಎಚ್.ಡಿ ಪೂರೈಸಿದ 28 ಅಭ್ಯರ್ಥಿಗಳಿಗೆ ಪ್ರಶಂಸಾ ಪ್ರಮಾಣಪತ್ರ ನೀಡಲಾಗುವುದು. ಧಾರವಾಡ ವಾಲ್ಮಿ ನಿರ್ದೇಶಕ ಡಾ. ಗಿರೀಶ ಮರಡ್ಡಿ ಅತಿಥಿಯಾಗಿ ಪಾಲ್ಗೊಂಡು ಘಟಿಕೋತ್ಸವ ಭಾಷಣ ಮಾಡುವರು. ಸಂಸ್ಥೆಯ ಕಾರ್ಯದರ್ಶಿ ಜೀವಂಧರಕುಮಾರ ಅಧ್ಯಕ್ಷತೆ ವಹಿಸುವರು ಎಂದರು.

ಪ್ರಸಕ್ತ ವರ್ಷ 518 ವಿದ್ಯಾರ್ಥಿಗಳು 90ಕ್ಕೂ ಹೆಚ್ಚು ಕಂಪನಿಗಳ ಉದ್ಯೋಗ ಪಡೆದಿದ್ದಾರೆ. ಓರ್ವ ವಿದ್ಯಾರ್ಥಿಗಗೆ ವಾರ್ಷಿಕ 32 ಲಕ್ಷ ರೂಪಾಯಿ ವೇತನ ಪ್ಯಾಕೇಜ್ ಲಭಿಸಿದೆ ಎಂದರು.