ಮೈಸೂರು: ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಮಹಾ ವಿದ್ಯಾಲಯದ ವಾರ್ಷಿಕೋತ್ಸವ ಶುಕ್ರವಾರ ಕಲಾಮಂದಿರದಲ್ಲಿ ನಡೆಯಿತು.
ಎಸ್‌ಡಿಎಂಇ ಸೊಸೈಟಿ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್ ಮಾತನಾಡಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಮಹಾ ವಿದ್ಯಾಲಯದ ವಿದ್ಯಾರ್ಥಿನಿಯ ಸಾಧನೆ ಹೆಮ್ಮೆ ತರುವ ರೀತಿಯಲ್ಲಿ ಇದೆ. ವಿದ್ಯಾರ್ಥಿಗಳ ಸಾಧನೆಯೇ ವಿದ್ಯಾಸಂಸ್ಥೆಯ ಸಾಧನೆ. ಇದು ಬಹಳ ಉತ್ತಮ ಕಾಲೇಜು ಇದು. ಕಾಲೇಜಿನ ರ‌್ಯಾಂಕಿಂಗ್ ಸಹ ಉತ್ತಮವಾಗಿದೆ. ಇದು ಸಂತಸದ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿ ದರು.
ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು, ಓದುವ ಹವ್ಯಾಸದಿಂದ ನಮ್ಮ ಬೌದ್ಧಿಕ ಶಕ್ತಿ ವೃದ್ಧಿಯಾಗುತ್ತದೆ. ಇದರಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ವಿದ್ಯಾರ್ಥಿಗಳು ದೇಶಕ್ಕೆ ನಾನು ಏನು ಕೊಡುಗೆ ನೀಡಬಲ್ಲೆ ಎಂಬ ಕುರಿತು ಚಿಂತನೆ ಮಾಡ ಬೇಕು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ. ಸಾಯಿನಾಥ್ ಮಲ್ಲಿಗೆಮಾಡು, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಪ್ರೊ. ನಯನ ಕುಮಾರಿ, ವಿದ್ಯಾರ್ಥಿನಿ ಕಾರ್ಯಕಾರಿ ಸಮಿತಿ ಅಧ್ಯಕ್ಷೆ ಸ್ನೇಹ ಸಿಂಗ್, ಉಪಾಧ್ಯಕ್ಷೆ ನಿಹಾರಿಕಾ ಜೋಷಿ, ಕಾರ್ಯದರ್ಶಿ ಇಫ್ರಾ ತಜೀನ್, ಸಾಂಸ್ಕೃತಿಕ ಕಾರ್ಯದರ್ಶಿ ಮೇಘಾ ಆನಂದ್, ಕ್ರೀಡಾ ಕಾರ್ಯದರ್ಶಿ ಕೆ.ಎಸ್. ಪೂರ್ವಿಕಾ, ಸಾಹಿತ್ಯಕ ಕಾರ್ಯದರ್ಶಿ ಪ್ರಿಯಾಂಕಾ ಪಲ್ಲೇಡ್, ಜಂಟಿ ಕಾರ್ಯದರ್ಶಿಗಳಾದ ಜಾನವಿ, ಜಿ.ವಿ. ಮೇಘಶ್ರೀ ಇದ್ದರು.