ಜಿಲ್ಲೆ

ಎಸ್‌ಡಿಎಂ ಚಾಂಪಿಯನ್, ಆಳ್ವಾಸ್ ರನ್ನರ್ ಅಪ್

Manikya M

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಉಜಿರೆಯ ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಯೋಜಿಸಿದ್ದ ಮಂಗಳೂರು ವಿಶ್ವವಿದ್ಯಾಲಯದ ಅಂತರ್ ಕಾಲೇಜು ಪುರುಷ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಉಜಿರೆಯ ಎಸ್.ಡಿ.ಎಂ ಕಾಲೇಜಿನ ತಂಡ ಚಾಂಪಿಯನ್‌ಷಿಪ್ ಮನ್ನಣೆಗೆ ಪಾತ್ರವಾಗಿ ಶ್ರೀರತ್ನವರ್ಮ ಹೆಗ್ಗಡೆ ಸ್ಮಾರಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಸಮಾರೋಪ ಸಮಾರಂಭದಲ್ಲಿ ಉಜಿರೆಯ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಶ್ವನಾಥ್ ಪಿ. ಟ್ರೋಫಿ ನೀಡಿದರು.

ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ವಿವಿಧ ಕಾಲೇಜುಗಳ 24 ತಂಡಗಳು ಭಾಗವಹಿಸಿದ್ದವು. ಫೈನಲ್ ಹಂತದ ಹಣಾಹಣಿಯಲ್ಲಿ ಮುನ್ನಡೆ ಸಾಧಿಸಿದ ಎಸ್.ಡಿ.ಎಂ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಮೂಲಕ ಎಸ್.ಡಿ.ಎಂ ಕಾಲೇಜಿನ ತಂಡ ಸತತ ನಾಲ್ಕನೇ ಬಾರಿಗೆ ಚಾಂಪಿಯನ್‌ಷಿಪ್‌ನ ಹೆಗ್ಗಳಿಕೆಯನ್ನು ಪಡೆದಂತಾಗಿದೆ.ಆಳ್ವಾಸ್ ಕಾಲೇಜು ತಂಡ ರನ್ನರ್ ಅಪ್ ಮನ್ನಣೆ ಪಡೆಯಿತು. ಮಂಗಳೂರಿನ ಗೋಕರ್ಣನಾಥೇಶ್ವರ ಕಾಲೇಜು ತಂಡ ಮೂರನೇ ಸ್ಥಾನ, ಸುಳ್ಯದ ಎನ್.ಎಂ.ಸಿ ಕಾಲೇಜು ತಂಡ ನಾಲ್ಕನೇ ಸ್ಥಾನ ಪಡೆಯಿತು..

ಅಂತರ್‌ವಲಯ ಪಂದ್ಯಾವಳಿಯ ಬೆಸ್ಟ್ ಆಲ್‌ರೌಂಡರ್ ಆಗಿ ಪ್ರಜ್ವಲ್, ಬೆಸ್ಟ್ ಡಿಫೆಂಡರ್ ಆಗಿ ಶಶಾಂಕ್, ಬೆಸ್ಟ್ ರೈಡರ್ ಆಗಿ ಯಶವಂತ್ ಹೆಗ್ಗುರುತು ಮೂಡಿಸಿದರು. ಮಂಗಳೂರು ವಲಯದ ಪಂದ್ಯಾವಳಿಯ ಬೆಸ್ಟ್ ಆಲ್‌ರೌಂಡರ್ ಆಗಿ ಎಸ್.ಡಿ.ಎಂ ಕಾಲೇಜಿನ ಪ್ರಜ್ವಲ್, ಬೆಸ್ಟ್ ಡಿಫೆಂಡರ್ ಆಗಿ ಸುಳ್ಯದ ಎನ್.ಎಂ.ಸಿ ಕಾಲೇಜಿನ ತಂಡದ ಅಭಿಷೇಕ್, ಬೆಸ್ಟ್ ರೈಡರ್ ಆಗಿ ಚೇತನ್ ಪ್ರಾಶಸ್ತ್ಯ ಪಡೆದರು. ಕೆ.ಮೋಹನ್ ಕುಮಾರ್, ಮಂಗಳೂರು ವಿ.ವಿ.ಯ ಕಬ್ಬಡ್ಡಿ ಪಂದ್ಯಾವಳಿಯ ವೀಕ್ಷಕ ರಾಧಾಕೃಷ್ಣ ಉಪಸ್ಥಿತರಿದ್ದರು.