ಜಿಲ್ಲೆ

ಆಯುರ್ವೇದ ಚಿಕಿತ್ಸಾ ಪದ್ಧತಿಗೆ ವಿಶೇಷ ಮಹತ್ವ: ಕೆ. ಪಿ. ರಾವ್

ಗೋಪಾಲಕೃಷ್ಣ ಪಾದೂರ್

ಉಡುಪಿ: ದೇಶದಲ್ಲಿ ಆಯುರ್ವೇದ ಚಿಕಿತ್ಸಾ ಪದ್ಧತಿ ಮಹತ್ವ ಪಡೆದಿದ್ದು, ವೈದ್ಯರು ಕೇವಲ ರೋಗವನ್ನು ಗುಣಪಡಿಸುವುದರ ಬಗ್ಗೆ ಅಷ್ಟೇ ಯೋಚಿಸದೆ ಗುಣಮಟ್ಟದ ಆರೋಗ್ಯಯುತ ಜೀವನವನ್ನು ಸಾಗಿಸಲು ನಾಗರಿಕರಿಗೆ ನೆರವಾಗುವಂತೆ ಭಾಷಾ ವಿಜ್ಞಾನಿ ಹಾಗೂ ಮಣಿಪಾಲ ಎಮ್​.ಐ.ಟಿಯ ನಿವೃತ್ತ ಪ್ರಾಧ್ಯಾಪಕ ಕೆ. ಪದ್ಮನಾಭ ರಾವ್​ ವಿದ್ಯಾರ್ಥಿಗಳಿಗೆ ಕರೆನೀಡಿದರು.

ಉದ್ಯಾವರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ವಿಶಿಖಾನುಪ್ರವೇಶ ಪದವಿ ಪ್ರದಾನ ಸಮಾರಂಭದಲ್ಲಿ
ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್​. ಅಧ್ಯಕ್ಷತೆ ವಹಿಸಿ, ಪದವಿಯನ್ನು ಪಡೆದ ವಿದ್ಯಾರ್ಥಿಗಳು ವೈದ್ಯ ವೃತ್ತಿಗೆ ಆದ್ಯತೆ ನೀಡಿ ಆಯುರ್ವೇದ ಜ್ಞಾನವನ್ನು ಕ್ರಿಯಾತ್ಮಕವಾಗಿ ಉಪಯೋಗಿಸಿ ಸಮಾಜಮುಖಿಯಾಗಬೇಕು ಎಂದರು.

ಎಸ್​.ಡಿ.ಎಮ್​. ಆಯುರ್ವೇದ ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ವತಿಯಿಂದ ಸ್ನಾತಕ ವಿದ್ಯಾರ್ಥಿನಿ ಡಾ. ಪ್ರಜ್ಞಾ ಎನ್​ ಅವರಿಗೆ ಉತ್ತಮ ಫಲಿತಾಂಶಕ್ಕಾಗಿ ಚಿನ್ನದ ಪದಕವನ್ನು ನೀಡಲಾಯಿತು.

ಕಾಲೇಜಿನ ಶೈಕ್ಷಣಿಕ ವಿಭಾಗದ ಮುಖ್ಯಸ್ಥೆ ಡಾ. ಶ್ರೀಲತಾ ಕಾಮತ್​ 73 ಸ್ನಾತಕ ಮತ್ತು 39 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾಲೇಜಿನ ಸ್ನಾತಕೋತ್ತರ ವಿಭಾಗದ ಡೀನ್​ ಡಾ. ಅಶೋಕ್​ ಕುಮಾರ್​ ಬಿ.ಎನ್​. ಹಾಗೂ ಸ್ನಾತಕ ವಿಭಾಗದ ಡೀನ್​ ಡಾ. ರಜನೀಶ್​ ವಿ. ಗಿರಿ, ಉಪಪ್ರಾಂಶುಪಾಲ ಡಾ. ನಿರಂಜನ್​ ರಾವ್​ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ. ಸ್ವಾಗತಿಸಿ, ಆಸ್ಪತ್ರೆಯ ವೈದ್ಯಕಿಯ ಅಧೀಕ್ಷಕ ಡಾ. ನಾಗರಾಜ್​ ಎಸ್​. ವಂದಿಸಿ, ಸಹಾಯಕ ಪ್ರಾಧ್ಯಾಪಕ ಡಾ. ಅರುಣ್​ ಕುಮಾರ್​ ಮತ್ತು ಡಾ. ಶುಭ ಪಿ.ಯು. ಕಾರ್ಯಕ್ರಮ ನಿರೂಪಿಸಿದರು.