ಜಿಲ್ಲೆ

ಸಮಾಜಮುಖಿ ಚಿಂತನೆ ರೂಢಿಸಿಕೊಳ್ಳಿ

ಎ. ಆರ್. ರಘುರಾಮ

ಸಾಲಿಗ್ರಾಮ: ಬದುಕಿರುವ ಅವಧಿಯಲ್ಲಿ ನಾವು ಸಮಾಜ ಸೇವೆ, ದಾನ, ಧಾರ್ಮಿಕ ಕಾರ್ಯ ಮತ್ತು ಸಮಾಜಮುಖಿ ಚಿಂತನೆ ರೂಢಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದು ಎಲೆಮುದ್ದನಹಳ್ಳಿ ಮಠದ ಶ್ರೀ ಮಲ್ಲೇಶ ಸ್ವಾಮೀಜಿ ಹೇಳಿದರು.

ಭೇರ್ಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಬುಧವಾರ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಅಷ್ಟಲಕ್ಷ್ಮೀ ಪೂಜೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಮನುಷ್ಯನ ಜನ್ಮ ದೊರಕಿರುವಾಗ ಉತ್ತಮ ಬದುಕು ಕಟ್ಟಿಕೊಂಡು ಜೀವನ ಮಾಡುವುದು ಬಹು ಮುಖ್ಯ. ಪ್ರಾಣಿ, ಪಕ್ಷಿಗಳಿಗಿಂತ ಮನುಷ್ಯನಿಗೆ ಬುದ್ಧಿ ವಿಕಾಸವಾಗಿದೆ. ಇದನ್ನು ಬಳಸಿಕೊಂಡು ಹುಟ್ಟು - ಸಾವಿನ ನಡುವಿನ ಅವಧಿಯನ್ನು ಸಾರ್ಥಕಪಡಿಸಿಕೊಳ್ಳಿ ಎಂದರು. ಇತ್ತೀಚಿನ ದಿನಗಳಲ್ಲಿ ಸಕಲ ಸೌಕರ್ಯ ಇದ್ದರೂ ಅನೇಕರು ಕಷ್ಟ, ನೋವುಗಳಲ್ಲೇ ಇರುತ್ತಾರೆ. ಭಗವಂತನ ಸೇವೆಗೆ ಸಲ್ಪ ಸಮಯ ನೀಡಿದರೆ ಧನ್ಯತೆ ಕಾಣಬಹುದು ಎಂದರು.