ಜಿಲ್ಲೆ

ಅನಧಿಕೃತ ಗೈರು, ಕರ್ತವ್ಯದಲ್ಲಿಯೂ ಲೋಪ: ದ್ವಿತೀಯ ದರ್ಜೆ ಸಹಾಯಕ ಅಮಾನತು

ಕೆ.ಎನ್.ರಾಘವೇಂದ್ರ

ಮಂಡ್ಯ: ಅನಧಿಕೃತ ಗೈರು ಹಾಜರಿ ಹಾಗೂ ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಮಂಡ್ಯ ತಾಲೂಕು ಕಚೇರಿ ದ್ವಿತೀಯ ದರ್ಜೆ ಸಹಾಯಕ ಎಂ.ಆರ್.ಗಿರೀಶ್ ಎಂಬುವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಆದೇಶಿಸಿದ್ದಾರೆ.

2022ರ ನವೆಂಬರ್‌ನಲ್ಲಿ 17 ದಿನ, ಡಿಸೆಂಬರ್‌ನಲ್ಲಿ 8 ಹಾಗೂ 2023ರ ಜನವರಿಯಲ್ಲಿ 11 ದಿನ ಕೆಲಸಕ್ಕೆ ಗೈರಾಗಿದ್ದಾರೆ. ಈ ಸಂಬಂಧ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದರೂ ಸಮಜಾಯಿಸಿ ನೀಡಿಲ್ಲ. ಅಲ್ಲದೆ ಪ್ರಕೃತಿ ವಿಕೋಪದಡಿ ಪರಿಹಾರ ನೀಡುವಂತೆ ಕೋರಿ ಸಾರ್ವಜನಿಕರು ಸಲ್ಲಿಸಿರುವ ಅರ್ಜಿ ಸಂಬಂಧ ಕ್ರಮ ಕೈಗೊಳ್ಳದೆ ಪರಿಹಾರ ಮಂಜೂರಾಗದೆ ತೊಂದರೆಯಾಗಿದೆ ಎಂದು ಆ.10 ರಂದು ತಾಲೂಕು ಕಚೇರಿಗೆ ಆಗಮಿಸಿದ ವೇಳೆ ಕೇಳಿ ಬಂದ ದೂರು ಆಧರಿಸಿ ಕ್ರಮ ವಹಿಸಿ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ.