The Eightfold Path of Donation and Puja Festival 
ಜಿಲ್ಲೆ

ಇಂದಿನಿಂದ ಪುರುಷರಲ್ಲಿ ಸಂತಾನ ಹೀನತೆ ಸಮಸ್ಯೆಗೆ ತಪಾಸಣೆ

ಗಿರೀಶ ಸಗರ

ವಿಜಯಪುರ: ನಗರದ ಬಾಗಲಕೋಟೆ ರಸ್ತೆಯಲಿರುವ ಬಿಎಲ್​ಡಿಇ ಸಂಸ್ಥೆಯ ಎವಿಎಸ್​ ಆಯುರ್ವೇದ ಮಹಾವಿದ್ಯಾಲಯದ ಕಾಯಚಿಕಿತ್ಸೆ ವಿಭಾಗದಿಂದ ಸೆ. 10 ರಿಂದ ಸೆ. 17 ರ ವರೆಗೆ ಪುರುಷರಲ್ಲಿ ಸಂತಾನ ಹೀನತೆ ಮತ್ತು ಪುರುಷರ ವೀರ್ಯದಲ್ಲಿನ ಸಮಸ್ಯೆಗೆ ಉಚಿತ ತಪಾಸಣೆ ಮತ್ತು ರಿಯಾಯಿತಿ ದರದಲ್ಲಿ ಚಿಕಿತ್ಸೆ ಶಿಬಿರ ನಡೆಯಲಿದೆ.ಸಮಸ್ಯೆ ಎದುರಿಸುತ್ತಿರುವ ಪುರುಷರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು. ಮಾಹಿತಿಗೆ ಆಯುರ್ವೇದ ಮಹಾವಿದ್ಯಾಲಯದ ಕಚೇರಿಗೆ ಸಂಪರ್ಕಿಸುವಂತೆ ಪ್ರಾಚಾರ್ಯ ಡಾ. ಅಶೋಕ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.