ಜಿಲ್ಲೆ

ಕೃಷಿ ಉತ್ಪನ್ನಗಳ ಹೊಸ ಕಾಯ್ದೆ ಕೈ ಬಿಡಿ

Dharwada - Santosh Vaidya

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಅಧಿಸೂಚಿತ ಕೃಷಿ ಉತ್ಪನ್ನಗಳ ಹೊಸ ಕಾಯ್ದೆಯನ್ನು ಕೈ ಬಿಡುವಂತೆ ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ರಾಜ್ಯ ಸರ್ಕಾರಕ್ಕೆ ಒತ್ತಾಯಿಸಬೇಕೆಂದು ಎಪಿಎಂಸಿ ಆಹಾರ ಧಾನ್ಯ ವರ್ತಕರ ಸಂಘ ಮನವಿ ಮಾಡಿದೆ.

ಈ ಕುರಿತು ಸಂಘದ ಪ್ರತಿನಿಧಿಗಳು, ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ.

ಹೊಸ ಕಾಯ್ದೆಯ ಬಗ್ಗೆ ರ್ಚಚಿಸಲು ಇತ್ತೀಚೆಗೆ ಹುಬ್ಬಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ವರ್ತಕರ ಸಭೆ ಕರೆದಿದ್ದರು. ಆದರೆ, ಹೊಸ ಕಾಯ್ದೆಯಲ್ಲಿ ಅನೇಕ ಲೋಪ ದೋಷಗಳಿವೆ. ಸಮಿತಿಯ ಹಿರಿಯ ಅಧಿಕಾರಿಗಳಿಗೆ ವರ್ತಕರು ಅಫಿಡೆವಿಟ್ ಸಲ್ಲಿಸಬೇಕೆಂದು ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ. ತಕ್ಷಣ ಈ ಕಾಯ್ದೆಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿದೆ.

ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಬೋರಟ್ಟಿ, ಅರ್ಜುನ ಅರ್ಗವಾಲ, ಇತರರು ಇದ್ದರು.