ಚಿಕ್ಕಮಗಳೂರಿನ ಸ್ಕೌಟ್ಸ್ ಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸ್ಥಳೀಯ ಸಂಸ್ಥೆ ಸಹಯೋಗದಲ್ಲಿ ಗೊರೂರು ಚೆನ್ನಬಸಪ್ಪ ಸ್ಮರಣಾರ್ಥ ಏರ್ಪಡಿಸಿದ್ದ ತಾಲೂಕು ಮಟ್ಟದ ದೇಶಭಕ್ತಿಗೀತೆಗಳ ಗೀತಗಾಯನ ಸ್ಪರ್ಧೆ ಉದ್ಘಾಟಿಸಿ ಬಿಇಒ ಎಚ್.ಸಿ.ರವೀಶ್ ಮಾತನಾಡಿದರು. ಕಿರಣ್ ಕುಮಾರ್, ನೀಲಕಂಠಾಚಾರ್, ನಂದಕುಮಾರ್ ಮತ್ತಿತರರಿದ್ದರು. 
ಜಿಲ್ಲೆ

ಸ್ಕೌಟ್ಸ್, ಗೈಡ್ಸ್ ಸೇವಾಭಾವನೆ, ಒಗ್ಗಟ್ಟು ಮೂಡಿಸಲಿದೆ

ಚಿಕ್ಕಮಗಳೂರು: ವಿದ್ಯಾರ್ಥಿಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಮಾನಸಿಕ ಹಾಗೂ ಶಾರೀರಿಕವಾಗಿ ಶಕ್ತಿ ತುಂಬುವ ಜೊತೆಗೆ ಶಿಸ್ತು, ಸೇವಾಭಾವನೆ, ಒಗ್ಗಟ್ಟು, ಕೌಶಲ್ಯ ಹಾಗೂ ಸಹಕಾರಿ ಮನೋಭಾವನೆ ಮೂಡಿಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಸಿ.ರವೀಶ್ ತಿಳಿಸಿದರು.

ನಗರದ ಸ್ಕೌಟ್ಸ್ ಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸ್ಥಳೀಯ ಸಂಸ್ಥೆ ಸಹಯೋಗದಲ್ಲಿ ಗೊರೂರು ಚೆನ್ನಬಸಪ್ಪ ಸ್ಮರಣಾರ್ಥ ಏರ್ಪಡಿಸಿದ್ದ ತಾಲೂಕು ಮಟ್ಟದ ದೇಶಭಕ್ತಿಗೀತೆಗಳ ಗೀತಗಾಯನ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಶಾಲಾ ಶಿಕ್ಷಣದ ಭಾಗ ಒಂದರಲ್ಲಿ ಶಾಲಾ ಪಠ್ಯಗಳಾದರೆ, ಭಾಗ ಎರಡಲ್ಲಿ ಚಟುವಟಿಕೆಗಳು ಮತ್ತು ಕೌಶಲ್ಯಗಳನ್ನು ಬೋಧಿಸಲಾಗುವುದು. ಅದರಂತೆ ಎನ್‌ಎಸ್‌ಕ್ಯೂಎಫ್‌ನಡಿಯಲ್ಲಿ ವಿವಿಧ ತರಬೇತಿಗಳನ್ನು ಶಾಲಾ ಮಕ್ಕಳಿಗೆ ಹಮ್ಮಿಕೊಳ್ಳಲಾಗಿದೆ. ಇವುಗಳನ್ನು ಮಕ್ಕಳು ಸದ್ಭಳಕೆ ಮಾಡಿಕೊಳ್ಳಬೇಕು. ಎನ್‌ಇಪಿ ಯೋಜನೆಯಲ್ಲಿ ಮಕ್ಕ ಳಿಗೆ ಪರಿಪೂರ್ಣತೆಗೆ ಮಹತ್ವ ನೀಡಲಾಗಿದೆ. ಓದಿನ ಜೊತೆಗೆ ಜೀವನದ ಪಾಠವನ್ನು ಕಲಿಯಬೇಕು ಎಂದರು.
ಸ್ಕೌಟ್ಸ್-ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ನೀಲಕಂಠಾಚಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಪರ್ಧೆಯಲ್ಲಿ ಶಾಲಾ-ಕಾಲೇಜಿನ ಕಪ್ಸ್, ಬುಲ್-ಬುಲ್ಸ್, ಸ್ಕೌಟ್ಸ್-ಗೈಡ್ಸ್, ರೋರ‍್ಸ್ ಮತ್ತು ರೇಂರ‍್ಸ್ ಮಕ್ಕಳಿಗೆ ದೇಶಭಕ್ತಿಗೀತೆಗಳ ಸ್ಪರ್ಧೆ ಏರ್ಪಡಿಸಿ ಸ್ವಾತಂತ್ರö್ಯ ಹೋರಾಟಗಾರ ನೆನಪಿಗಾಗಿ ಮಕ್ಕಳಲ್ಲಿ ದೇಶಭಕ್ತಿ ಪರಿಚಯಿಸಲಾಗುತ್ತಿದೆ ಎಂದು ಹೇಳಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಘಟಕ ಕಿರಣ್‌ಕುಮಾರ್ ಮಾತನಾಡಿ, ಸ್ಪರ್ಧೆಯನ್ನು ಆರು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಕಪ್ಸ್, ಬುಲ್-ಬುಲ್ಸ್ನಲ್ಲಿ ಮಾಡೆಲ್ ಆಂಗ್ಯಮಾಧ್ಯಮ ಶಾಲೆ ಪ್ರಥಮ, ಸ್ಕೌಟ್ಸ್ನಲ್ಲಿ ಸಂತ ಜೋಸೆಫರ ಪ್ರೌಢಶಾಲೆ ಪ್ರಥಮ, ಗೈಡ್ಸ್ನಲ್ಲಿ ಇಪ್ಯಾಟ್ ಜೀಸಸ್ ಪ್ರಥಮ ಹಾಗೂ ರೋರ‍್ಸ್ ಹಾಗೂ ರೇಂರ‍್ಸ್ನಲ್ಲಿ ಸಂತ ಜೋಸೆಫರ ಪಿಯು ಕಾಲೇಜು ಪ್ರಥಮ ಸ್ಥಾನ ಪಡೆದುಕೊಂಡು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಮುಖರಾದ ನಂದಕುಮಾರ್ ಅಧ್ಯಕ್ಷತೆ ವಹಿಸಿದ್ದರು. ತೀರ್ಪುಗಾರರಾಗಿ ಜಯಣ್ಣ ಮತ್ತು ತಂಡ, ತಾಲೂಕು ಕಾರ್ಯದರ್ಶಿ ನಟರಾಜ್, ಖಜಾಂಚಿ ರಾಘವೇಂದ್ರ ಮತ್ತಿತರರಿದ್ದರು.