ಜಿಲ್ಲೆ

ಏಕಶಿಲಾ ಬೆಟ್ಟದಲ್ಲಿ ಸ್ಕೌಟ್ಸ್​, ಗೈಡ್ಸ್​ ವಿದ್ಯಾರ್ಥಿಗಳಿಂದ ಚಾರಣ

ತುಮಕೂರು ಡೆಸ್ಕ್

ಮಧುಗಿರಿ : ಪಟ್ಟಣದ ಏಕಶಿಲಾ ಬೆಟ್ಟಕ್ಕೆ ಭಾನುವಾರ ಬೆಂಗಳೂರಿನ ಉತ್ತರ ವಲಯದ ಭಾರತ್​ ಸ್ಕೌಟ್ಸ್​, ಗೈಡ್ಸ್​, ರೇಂಜ್​ ರೋವರ್​ ಮತ್ತು ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದೊಂದಿಗೆ 200 ವಿದ್ಯಾರ್ಥಿಗಳು ಚಾರಣ ನಡೆಸಿದರು.ಬೆಳಗ್ಗೆ 7 ಕ್ಕೆ ಏಕಶಿಲಾ ಬೆಟ್ಟದ ಕೋದಂಡರಾಮಸ್ವಾಮಿ ದೇವಸ್ಥಾನದಿಂದ ಚಾರಣ ನಡೆಸುವುದರ ಜತೆಗೆ ಏಕಶಿಲಾ ಬೆಟ್ಟದಲ್ಲಿ ಬಿದ್ದಿದ್ದ ಸುಮಾರು 10 ಚೀಲ ಪ್ಲಾಸ್ಟಿಕ್​ ತ್ಯಾಜ್ಯ ಸಂಗ್ರಹಿಸಿ ತಂದು ಪುರಸಭೆ ವಾಹನಕ್ಕೆ ನೀಡಿ ಸ್ವಚ್ಛತೆ ಜಾಗೃತಿ ಮೂಡಿಸಿದರು.

ವಿದ್ಯಾರ್ಥಿಗಳೊಂದಿಗೆ ಚಾರಣದಲ್ಲಿ ಭಾಗವಹಿಸಿದ್ದ ಪುರಸಭೆ ಅಧ್ಯ ಲಾಲಾಪೇಟೆ ಮಂಜುನಾಥ್​ ಮಾತನಾಡಿ, ಮುಂದಿನ ದಿನಗಳಲ್ಲಿ ಶಾಸಕ ಕೆ.ಎನ್​. ರಾಜಣ್ಣ ಮತ್ತು ವಿಧಾನ ಪರಿಷತ್​ ಸದಸ್ಯ ರಾಜೇಂದ್ರ ರಾಜಣ್ಣ ಅವರು ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್​ವೇ ಕಾಮಗಾರಿಗೆ ಚಾಲನೆ ನೀಡಲಿದ್ದು, ೇತ್ರಪ್ರವಾಸೋದ್ಯಮ ಕೇಂದ್ರವಾಗಲಿದೆ. ಇದರಿಂದ ಪ್ರವಾಸಿಗರಿಗೆ ಚಾರಣಕ್ಕೆ ಅನುಕೂಲವಾಗಲಿದೆಎಂದರು.ವಿದ್ಯಾರ್ಥಿಗಳಿಗೆ ಪ್ರವಾಸೋದ್ಯಮ ತಾಣಗಳ ಬಗ್ಗೆ ಪರಿಚಯಿಸುವುದರ ಜತೆಗೆ ಪರಿಸರದ ಬಗ್ಗೆ ಕಾಳಜಿ ಬೆಳೆಸುವ ಉದ್ದೇಶದಿಂದ ಏಕಶಿಲಾ ಬೆಟ್ಟಕ್ಕೆ ಚಾರಣ ನಡೆಸಿದ್ದು, ಬೆಂಗಳೂರು ಮತ್ತು ಮಧುಗಿರಿಯ ಸುಮಾರು 200 ಕ್ಕೂ ಹೆಚ್ಚು ಭಾರತ್​ ಸ್ಕೌಟ್ಸ್​ ಮತ್ತು ಗೈಡ್ಸ್​ನ ವಿದ್ಯಾರ್ಥಿಗಳು ಚಾರಣ ಕೈಗೊಂಡು ಸ್ವಚ್ಛತೆ ಕಾರ್ಯ ನಡೆಸಿರುವುದು ಶ್ಲಾನೀಯ ಎಂದರು.ಚಾರಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ. ಕೆ.ಎಸ್​. ಕುಮಾರ್​, ರಾಜ್ಯ ಸಹಾಯಕ ಸಂಟಕ ಟಿ.ಕರಿಸಿದ್ದಪ್ಪ, ಕಾರ್ಯದರ್ಶಿ ತಿಮ್ಮರಾಜು, ಪ್ರಾಧಾಯಪಕರಾದ ಮಂಜುನಾಥ್​, ವೇದಲ್ಮ, ನಿತಿನ್​, ಡಿ.ದರ್ಶನ್​, ದೈಹಿಕ ಶಿಣ ನಿರ್ದೇಶಕ ಕೆ.ಮುರಳೀಧರ್​ ಇತರರು ಇದ್ದರು.