ಚಿಕ್ಕಮಗಳೂರಿನ ಬಿಜಿಎಸ್ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ೫ ದಿನಗಳ ಕಬ್ ಮತ್ತು ಬುಲ್‌ಬುಲ್ ಉತ್ಸವದ ಸಮಾರೋಪ ಸದಮಾರಂಭವನ್ನುz್ದೆÃಶಿಸಿ ಕರ್ನಾಟಕ ವಿಧಾನಸಭೆ ಮಾಜಿ ಅಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿದರು. ಎಚ್.ಡಿ.ತಮ್ಮಯ್ಯ, ಎಂ.ಎನ್.ಷಡಾಕ್ಷರಿ, ಎ.ಎನ್.ಮಹೇಶ್, ಚಂದ್ರಶೇಖರ್ ಮತ್ತಿತರರಿದ್ದರು. 
ಜಿಲ್ಲೆ

ಬಹುತೇಕ ದೇಶಗಳಲ್ಲಿ ಸ್ಕೌಟ್ ಪ್ರಚಲಿತ

ನಿತ್ಯಾನಂದ ಎಸ್.ಎನ್.

ಚಿಕ್ಕಮಗಳೂರು: ಇತ್ತಿಚಿನ ದಿನಗಳಲ್ಲಿ ಜಗತ್ತಿನ ಬಹುತೇಕ ರಾಷ್ಟçಗಳಲ್ಲಿ ಸ್ಕೌಟಿಂಗ್ ಪ್ರಚಲಿತದಲ್ಲಿರುವುದನ್ನು ಕಾಣಬಹುದು. ಸ್ವಯಂಪ್ರೇರಿತ ಶಿಸ್ತಿನ ಜೀವನದ ಆಯ್ಕೆ ಇಂತಹ ಸಂಸ್ಥೆಗಳಿAದ ಸಾಧ್ಯ ಎಂದು ಕರ್ನಾಟಕ ರಾಜ್ಯ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಹಾಗೂ ವಿಧಾನಸಭೆ ಮಾಜಿ ಸ್ಪೀಕರ್ ಬಿ.ಎಲ್.ಶಂಕರ್ ತಿಳಿಸಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಸಂಸ್ಥೆ ವತಿಯಿಂದ ಹೌಸಿಂಗ್ ಬೋರ್ಡ್ನ ಬಿಜಿಎಸ್ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ೫ ದಿನಗಳ ಕಬ್ ಮತ್ತು ಬುಲ್‌ಬುಲ್ ಉತ್ಸವದ ಸಮಾರೋಪ ಭಾಷಣ ಮಾಡಿ, ಯಾವುದೇ ಅಪೇಕ್ಷೆ ಇಲ್ಲದೆ ನಿಸ್ಪಕ್ಷಪಾತ ಸೇವೆಯನ್ನು ನಾವು ಸ್ಕೌಟಿಂಗ್‌ನಲ್ಲಿ ನೋಡಲು ಸಾಧ್ಯ. ಈ ರೀತಿಯ ಸಂಸ್ಥೆಗಳು ಮಕ್ಕಳನ್ನು ವಿಶ್ವಮಾನವನನ್ನಾಗಿ ಮಾಡಲು ಸಹಕಾರಿಯಾಗಿವೆ ಎಂದರು.
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎನ್ನುವ ನಾಣ್ಣುಡಿಯಂತೆ ಶಿಸ್ತು, ಸಮಯಪ್ರಜ್ಞೆ, ವಿಧೇಯತೆ, ರಾಷ್ಟçಪ್ರೇಮ, ಸೇವೆ ಇಂತಹ ಒಳ್ಳೆಯ ನಡತೆಗಳನ್ನು ಮಕ್ಕಳಿಗೆ ಕಲಿಸುವಲ್ಲಿ ಈ ಸ್ಕೌಟ್ ಚಳುವಳಿಯ ಮಹತ್ತರ ಪಾತ್ರ ವಹಿಸಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ ಮಕ್ಕಳು ಸಹಬಾಳ್ವೆಯ ಮೂಲಕ ಬ್ರಾತೃತ್ವವನ್ನು ಬೆಳೆಸಿಕೊಳ್ಳುತ್ತಾರೆ ಎಂದು ಹೇಳಿದರು.
ಸ್ವಾಸ್ಥö್ಯ ಸಮಾಜದ ನಿರ್ಮಾಣಕ್ಕಾಗಿ ಬ್ರಾತೃತ್ವವನ್ನು ಈ ರೀತಿಯ ಸೇವಾ ಸಂಸ್ಥೆಗಳು ಮಹತ್ತರ ಕೊಡುಗೆ ನೀಡಬಹುದಾಗಿದೆ. ಕ್ಷೀಣಿಸುತ್ತಿರುವ ಸಾಮಾಜಿಕ ಮೌಲ್ಯಗಳ ನಡುವೆ ಈ ಚಳುವಳಿಯು ಒಂದು ಮಹತ್ತರ ಆಶಾಕಿರಣವಾಗಿದೆ ಎಂದರು.
ಉತ್ಸವದ ಅಂಗವಾಗಿ ಹೊರತರಲಾದ ದಿಕ್ಸೂಚಿ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಭದ್ರಕಾಡ ಅಧ್ಯಕ್ಷ ಡಾ. ಅಂಶುಮAತ್, ಪುಟ್ಟ ಮಕ್ಕಳು ಇಂತಹ ಸಂಸ್ಥೆಗಳ ಸದಸ್ಯರಾಗಿ ದೇಶಕ್ಕೆ ಕೀರ್ತಿ ತಂದು ದೇಶದ ಭವಿಷ್ಯವನ್ನು ಉತ್ತಮವಾಗಿ ರೂಪಿಸಬೇಕು. ಶಿಬಿರ ಪ್ರಾರಂಭವಾಗಿ ೪ ದಿನಗಳಾದರು ಮಕ್ಕಳ ಮುಖದಲ್ಲಿರುವ ಲವಲವಿಕೆಯನ್ನು ನೋಡಿದರೆ ಎಲ್ಲರೂ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗುವ ಲಕ್ಷಣ ಎದ್ದು ಕಾಣುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬAತೆ ವಿದ್ಯಾರ್ಥಿಗಳಲ್ಲಿ ಕೌಶಲಗಳು, ಸಾಹಿತ್ಯ, ಸಾಂಸ್ಕೃತಿಕ ಅಭಿರುಚಿಗಳ ಜೊತೆಗೆ ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸಲು ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆ ಸಹಕಾರಿಯಾಗಿದೆ. ಈಗಾಗಲೆ ಈ ಸಂಸ್ಥೆ ಸುಮಾರು ೨೦೦ಕ್ಕೂ ಹೆಚ್ಚು ದೇಶಗಳಲ್ಲಿ ಬೆಳೆಯುತ್ತಿರುವುದು ಸಂತಸದ ಸಂಗತಿ. ನಮ್ಮ ದೇಶದ ಉತ್ತರ ಮತ್ತು ಸ್ವಾಸ್ಥö್ಯ ಸಮಾಜದ ನಿರ್ಮಾಣಕ್ಕಾಗಿ ಈ ಸಂಸ್ಥೆಗಳು ಈ ರೀತಿಯ ಚಟುವಟಿಕೆಗಳನ್ನು ನಿಸ್ವಾರ್ಥ ಸೇವೆಯಿಂದ ನಡೆಸಬೇಕು ಎಂದರು.
ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಮಾತನಾಡಿ, ಇಂತಹ ಕಾರ್ಯಕ್ರಮಗಳ ಆಯೋಜನೆಯಿಂದ ಮಕ್ಕಳಲ್ಲಿ ದೈರ್ಯ, ಉತ್ಸಾಹ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳೆಲ್ಲಾ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಉತ್ತಮವಾಗಿ ಬೆಳೆಯಬೇಕು ಎಂದು ಹೇಳಿದರು.
ನಗರಸಭೆ ಸದಸ್ಯೆ ಕವಿತಾ ಶೇಖರ್ ಮಾತನಾಡಿ, ವಿದ್ಯಾರ್ಥಿಗಳು ಹಾಡಿದ ಉತ್ಸವ ಗೀತೆಯು ಸ್ಕೌಟಿಂಗ್‌ನಲ್ಲಿ ಕಲಿಯಬೇಕಾದ ಎಲ್ಲಾ ಅಂಶಗಳನ್ನು ಒಳಗೊಂಡಿವೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಒಳ್ಳೆಯ ವೇದಿಕೆಯಾಗಿದ್ದು, ಅವರಲ್ಲಿ ಆತ್ಮಾಭಿಮಾನ ಮತ್ತು ರಾಷ್ಟçಪ್ರೇಮವನ್ನು ಬೆಳೆಸುತ್ತದೆ ಎಂದರು.
ಶ್ರೀ ಮಂಜುನಾಥೇಶ್ವರ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕ ಚಂದ್ರಶೇಖರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಲು ಸ್ಕೌಟ್ಸ್ ಕಾರ್ಯಕ್ರಮಗಳು ಪೂರಕವಾಗಿವೆ. ವಿದ್ಯಾರ್ಥಿಗಳು ಶಿಬಿರ ಮುಗಿದ ಬಳಿಕ ಇಲ್ಲಿ ಕಲಿತ ವಿಷಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು ಹೇಳಿದರು.
ಸ್ಕೌಟ್ಸ್ ಜಿಲ್ಲಾ ಮುಖ್ಯ ಆಯುಕ್ತ ಎಂ.ಎನ್.ಷಡಕ್ಷರಿ ಮಾತನಾಡಿ, ಯಾವುದೇ ಸೋಂಕಿಲ್ಲದೆ ನಡೆಯುತ್ತಿರುವ ಸಂಸ್ಥೆ ಎಂದರೆ ಅದುವೇ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆ. ಕ್ರಿಯಾಶೀಲಾ ಕಲಿಕೆಗೆ ಇಂತಹ ಚಟುವಟಿಕೆಗಳು ಸಾಕ್ಷಿಯಾಗಿರುತ್ತದೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಹೊಸತನವನ್ನು ಹುಟ್ಟು ಹಾಕುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯ ರಾಜ್ಯ ಉಪಾಧ್ಯಕ್ಷ ಎ.ಎನ್ ಮಹೇಶ್ ಮತ್ತಿತರರಿದ್ದರು.