ಜಿಲ್ಲೆ

ಸ್ಕೂಟಿ, ರಿಕ್ಷಾ ಡಿಕ್ಕಿಯಾಗಿ ಪ್ರಯಾಣಿಕರಿಗೆ ಗಾಯ

ಸೌಮ್ಯ ಆರ್

ಸುಳ್ಯ: ಅಜ್ಜಾವರದ ಇರಂತಮಜಲು ಎಂಬಲ್ಲಿ ಸ್ಕೂಟಿಗೆ ರಿಕ್ಷಾ ಡಿಕ್ಕಿಯಾದ ಪರಿಣಾಮ ಸವಾರರಿಬ್ಬರು ಗಾಯಗೊಂಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ಅಜ್ಜಾವರದ ತುದಿಯಡ್ಕದಲ್ಲಿ ಕಾರ್ಯಕ್ರಮ ಮುಗಿಸಿ, ಕಾಸರಗೋಡಿನ ಮಲ್ಲಕ್ಕೆ ಸ್ಕೂಟಿಯಲ್ಲಿ ಹೋಗುತ್ತಿದ್ದ ಜನಾರ್ದನ, ಉಷಾ ದಂಪತಿಯ ಸ್ಕೂಟಿಗೆ, ಸುಳ್ಯದ ಕಡೆ ಬರುತ್ತಿದ್ದ ಪೇರಾಲಿನ ಹರಿಪ್ರಸಾದ್ ಎಂಬುವರ ರಿಕ್ಷಾ ಡಿಕ್ಕಿಯಾಯಿತು. ಈ ಅಪಘಾತದಿಂದ ರಿಕ್ಷಾ ಪಲ್ಟಿಯಾಗಿ ಸ್ಕೂಟಿಯಲ್ಲಿದ್ದ ದಂಪತಿಗಳು ರಸ್ತೆ ಬದಿಗೆ ಎಸೆಯಲ್ಪಟ್ಟರು. ಜನಾರ್ದನರ ಕೈಗೆ, ಉಷಾ ಅವರ ಕಾಲಿಗೆ ಗಾಯ, ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಹೃತಿಕ್ ಎಂಬುವರಿಗೂ ಗಾಯವಾಗಿದೆ.