ಜಿಲ್ಲೆ

ಕಾರು ಡಿಕ್ಕಿಯಾಗಿ ಸ್ಕೂಟರ್ ಸವಾರ ಸಾವು

ಮಾದೇಶ್ ತಿ.ನರಸೀಪುರ

ಬನ್ನೂರು: ಪಟ್ಟಣದ ಕಾವೇರಿ ಸೇತುವೆ ಬಳಿ ಭಾನುವಾರ ಕಾರು ಡಿಕ್ಕಿಯಾಗಿ ಸ್ಕೂಟರ್ ಸವಾರ ಸಾವಿಗೀಡಾಗಿದ್ದಾನೆ.

ಪಟ್ಟಣ ಸಮೀಪದ ಹೂವಿನಕೊಪ್ಪಲು ಗ್ರಾಮದ ನಿವಾಸಿ, ಸ್ಕೂಟರ್ ಸವಾರ ಕೆಂಪಯ್ಯ(70) ಮೃತರು.

ರಂಗಾಚಾರಿ ಹುಂಡಿ ಗ್ರಾಮದಿಂದ ಬರುವಾಗ ಮಳವಳ್ಳಿ ಕಡೆಯಿಂದ ಮೈಸೂರು ಕಡೆಗೆ ವೇಗವಾಗಿ ಬರುತ್ತಿದ್ದ ಕಾರು ಎದುರಿನಿಂದ ಬರುತ್ತಿದ್ದ ಕೆಂಪಯ್ಯ ಅವರ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಾಲಕ ಕಾರನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ. ಬನ್ನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.