ಜಿಲ್ಲೆ

ಸ್ಕೂಟರ್‌ಗೆ ಕಾರು ಡಿಕ್ಕಿ, ಸವಾರನಿಗೆ ಗಂಭೀರ ಗಾಯ

ಸೌಮ್ಯ ಆರ್

ಗುರುಪುರ: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಗುರುಪುರಕ್ಕೆ ಹತ್ತಿರದ ಪೊಳಲಿ ದ್ವಾರದ ಬಳಿ ಬಾಮಿ ಶಾಲೆಯ ಹತ್ತಿರ ಮಂಗಳವಾರ ಬೆಳಗ್ಗೆ ಸ್ಕೂಟರ್‌ಗೆ ಕಾರು ಡಿಕ್ಕಿ ಹೊಡೆದಿದ್ದು, ದ್ವಿಚಕ್ರ ವಾಹನ ಸಂಪೂರ್ಣ ಜಖಂಗೊಂಡು ಯುವಕನೊಬ್ಬ ಗಂಭೀರ ಗಾಯಗೊಂಡಿದ್ದಾನೆ.

ಗಾಯಾಳು ಕುಪ್ಪೆಪದವಿನ ದೊಡ್ಡಳಿಕೆಯ ಉದಯ ಎಂಬುವರಾಗಿದ್ದು, ಕಾಲಿಗೆ ಗಂಭೀರ ಗಾಯವಾಗಿದೆ. ಸ್ಕೂಟರ್‌ನ ಹಿಂಬದಿ ಕುಳಿತ್ತಿದ್ದ ರಾಕೇಶ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ವೃತ್ತಿಯಲ್ಲಿ ಇಲೆಕ್ಟ್ರಿಶಿಯನ್ ಆಗಿರುವ ಉದಯ ಮತ್ತು ಗೆಳೆಯ ರಾಕೇಶ್ ಮಂಗಳೂರಿನತ್ತ ಸಾಗುತ್ತಿದ್ದಾಗ ಘಟನೆ ನಡೆದಿದೆ. ಹೆದ್ದಾರಿ ತಿರುವಿನಲ್ಲಿ ಓವರ್ ಟೇಕ್ ಮಾಡುವ ಧಾವಂತದಲ್ಲಿ ರಿಟ್ಜ್ ಕಾರು ಸ್ಕೂಟರ್‌ಗೆ ಗುದ್ದಿದೆ. ಗಾಯಾಳು ಉದಯ್‌ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.