ಜಿಲ್ಲೆ

ಹಬ್ಬದ ವಾತಾವರಣದಲ್ಲಿ ಶಾಲೆ ಆರಂಭೋತ್ಸವ

ಮಂಜುನಾಥ ಕೋಳಿಗುಡ್ಡ


ಬೆಳಗಾವಿ:ಬೇಸಿಗೆ ರಜೆಯಲ್ಲಿ ಖುಷಿಯಿಂದ ಊರು, ಕೇರಿ ಎಂದು ಓಡಾಡಿಕೊಂಡಿದ್ದ ಮಕ್ಕಳು ಶುಕ್ರವಾರ ಶಾಲೆಯತ್ತ ಹೆಜ್ಜೆ ಹಾಕಿ ತಮ್ಮ ಸಹಪಾಠಿಗಳೊಂದಿಗೆ ಸಂಭ್ರಮಿಸಿದರು.
ಮೂಡಲಗಿ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಶುಕ್ರವಾರ ಟ್ರ್ಯಾಕ್ಟರ್ ನಲ್ಲಿ ಮೆರವಣಿಗೆ ಮೂಲಕ ವಿದ್ಯಾರ್ಥಿಗಳು, ಶಿಕ್ಷಕರು, ಎಸ್ ಡಿಎಂಸಿ ಸದಸ್ಯರು, ಗ್ರಾಪಂ ಸದಸ್ಯರು ಶಾಲಾ ಆರಂಭೋತ್ಸವ ಆಚರಿಸಿದರು.
ಜಿಲ್ಲಾದ್ಯಂತ ಶುಕ್ರವಾರ ಶಾಲೆಗಳು ಆರಂಭವಾಗಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.ಬೇಸಿಗೆ ರಜೆಯಲ್ಲಿ ಮಜಾ ಮಾಡಿದ ಮಕ್ಕಳು ಶಾಲೆಗೆ ಆಗಮಿಸಿ ಸಹಪಾಠಿಗಳೊಂದಿಗೆ ಅನುಭವ ಹಂಚಿಕೊಂಡರು. ಶಾಲೆ ಆವರಣ, ಕೊಠಡಿಗಳನ್ನು ಸ್ವಚ್ಛಗೊಳಿಸಿ, ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ, ಸಿಹಿ ಹಂಚುವ ಮೂಲಕ ವಿದ್ಯಾರ್ಥಿಗಳನ್ನು ಶಿಕ್ಷಕರು ಬರಮಾಡಿಕೊಂಡರು.