ಜಿಲ್ಲೆ

ಸರ್ಕಾರಗಳು ಬೆಳೆಗಳಿಗೆ ವೈಜ್ಞಾನಿಕ ಬೆಲೆ ಕೊಡಲಿ

Chitradurga

ಚಿತ್ರದುರ್ಗ: ಬೆಳೆಗಳಿಗೆ ನ್ಯಾಯಯುತ ಬೆಲೆ ಕೊಡಿ,ಇಲ್ಲವೆ ಪ್ರತಿ ಮನೆಗೊಂದು ಉದ್ಯೋಗ ಕೊಡಿ ಎಂದು ರಾಜ್ಯರೈತ ಸಂಘ,ರೈತ ಪರ್ವ ಸಂಘದ ಅಧ್ಯಕ್ಷ ಟಿ.ವಿ.ಅರುಣ್‌ಕುಮಾರ್ ಕೇಂದ್ರ ಮತ್ತು ರಾಜ್ಯಸರ್ಕಾರಗಳಿಗೆ ಮನವಿ ಮಾಡಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ರಾಜ್ಯರೈತ ಸಂಘ ರೈತ ಪರ್ವ ಸಂಘದ ಜಿಲ್ಲಾಧ್ಯಕ್ಷ ಹಾಗೂ ತಾಲೂಕು ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಸಣ್ಣ ಹಿಡುವಳಿದಾರರ ಮಕ್ಕಳಿಗೆ ಸರಕಾರಿ ಹುದ್ದೆಗಳಲ್ಲಿ ಶೇ.25 ಮೀಸಲು ನೀಡ ಬೇಕು.

ಬೆಳೆಗೂ ಮುನ್ನವೇ ಉತ್ಪನ್ನದ ಆಧರಿಸಿ ರೈತರಿಗೆ ಮುಂಗಡ ನೀಡುವ ಯೋಜನೆ ಜಾರಿಗೆ ತರಬೇಕು. ಕೃಷಿಕರ ಮಕ್ಕಳಿಗೆ ಪ್ರಾಥಮಿಕ ಹಂತದಿಂದ ಉನ್ನತ ಪದವಿವರೆಗೂ ಉಚಿತ ಶಿಕ್ಷಣ ನೀಡಬೇಕೆಂದರು.

ರಾಜ್ಯ ಸಂಘದ ಉಪಾಧ್ಯಕ್ಷ ಮಾಳೇನಹಳ್ಳಿ ಎನ್.ವೆಂಕಟೇಶ್ ಮಾತನಾಡಿ,ಕೇಂದ್ರ ಸರಕಾರ ಅಡಕೆ ಆಮದು ಸ್ಥಗಿತಗೊಳಿಸ ಬೇಕು. ಗಂಗಾ ಕಲ್ಯಾಣ ಯೋಜನೆಯಿಂದ ಸಣ್ಣ ರೈತರಿಗೆ ಪ್ರಯೋಜನವಾಗುತ್ತಿಲ್ಲ.

ನಲವತ್ತು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಹೊಳಲ್ಕೆರೆ ತಾಲೂಕಿನ ಸಾವಿರಾರು ರೈತರಿಗೆ ಹಕ್ಕುಪತ್ರ ಸಿಕ್ಕಿಲ್ಲ. ಈ ಎಲ್ಲ ಸಾಗುವಳಿದಾರರಿಗೆ ಹಕ್ಕುಪತ್ರ ಸಿಗುವವರೆಗೂ ಹೋರಾಟ ನಡೆಸಲಾಗುವುದು ಎಂದರು.

ಸಂಘದ ಜಿಲ್ಲಾಧ್ಯಕ್ಷ ಶಿವಮೂರ್ತಿ,ಸಂಘದ ಹೊಸದುರ್ಗ ತಾಲೂಕು ಅಧ್ಯಕ್ಷ ಇ.ಅರುಣ್‌ಕುಮಾರ್,ಹಿರಿಯೂರು-ಆರ್.ರಮೇ ಶ್,ಮೊಳಕಾಲ್ಮೂರು-ಚಂದ್ರಪ್ಪ ಬಿ.ಜಿ.ಕೆರೆ,ಹೊಳಲ್ಕೆರೆ-ಎಸ್.ಕೆ.ಶ್ರೀಕಾಂತ್,ಚಳ್ಳಕೆರೆ ತಾಲೂಕು ಅಧ್ಯಕ್ಷ ಎನ್.ಮನೋಹರ್ ಹಾಗೂ ಭ ರಮಸಾಗರದ ಅಧ್ಯಕ್ಷ ಹೊನ್ನಪ್ಪ.

ರಾಜ್ಯ ಸಂಘದ ಕಾರ‌್ಯದರ್ಶಿ ಚಾಮರಾಜ್,ಉಪಾಧ್ಯಕ್ಷರಾದ ಭರತ್‌ರಾಜ್,ಸುಷ್ಮಾ,ಕಾರ‌್ಯದರ್ಶಿ ಕು ಮಾರ್,ಸಂಘಟನಾ ಕಾರ್ಯದರ್ಶಿ ಪುಟ್ಟರಾಜ್,ಬೆಂಗಳೂರು ನಗರಾಧ್ಯಕ್ಷ ಮಹೇಶ್,ಮಹಿಳಾ ಕಾರ‌್ಯದರ್ಶಿ ಸುಶೀಲಾ,ಶಿವಣ್ಣ, ಭ ರತ್‌ರಾಜ್,ಶಂಭು ಲಿಂಗೇಗೌಡ ಇತರರು ಇದ್ದರು.