ಗಂಗಾವತಿಯ ನೀಲಕಂಠೇಶ್ವರ ವೃತ್ತದ ಬಳಿ ಬಾಲಕಿಯರ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕ ಪರಣ್ಣ ಮುನವಳ್ಳಿ ಶನಿವಾರ ಸರ್ಕಾರಿ ಶಾಲೆಗಳಿಗೆ ವಿಜ್ಞಾನ ಕಿಟ್ ವಿತರಿಸಿದರು. ಮಾಜಿ ಸಂಸದ ಎಸ್.ಶಿವರಾಮನಗೌಡ, ಬಿಇಒ ಸೋಮಶೇಖರಗೌಡ ತಿಪ್ಪನಾಳ್ ಇತರರಿದ್ದರು. 
ಜಿಲ್ಲೆ

ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿ

Gangavati - Mohan Kumar H R

ಗಂಗಾವತಿ: ಕಲಿಕೆ ಜತೆಗೆ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ನಗರದ ನೀಲಕಂಠೇಶ್ವರ ವೃತ್ತದ ಬಳಿ ಬಾಲಕಿಯರ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ವಿಜ್ಞಾನ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾಜಿ ಸಿಎಂ ಯಡಿಯೂರಪ್ಪ ಮತ್ತು ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ಅವರ ದೂರದೃಷ್ಟಿ ಸಂಘ ಸ್ಥಾಪನೆಯಾಗಿದೆ. ಮಹಿಳಾ ಮತ್ತು ಯುವ ಸಬಲೀಕರಣಕ್ಕಾಗಿ ಅನುದಾನ ಮೀಸಲಿಟ್ಟಿದ್ದು, ತರಬೇತಿ ಮೂಲಕ ಕೌಶಲಕ್ಕೆ ಆದ್ಯತೆ ನೀಡಲಾಗಿದೆ ಎಂದರು.

ಮಾಜಿ ಸಂಸದ ಎಸ್.ಶಿವರಾಮನಗೌಡ ಮಾತನಾಡಿದರು. ಸಂಘದ ನಿರ್ದೇಶಕಿ ಲೀಲಾ ಮಲ್ಲಿಕಾರ್ಜುನ, ಬಿಇಒ ಸೋಮಶೇಖರಗೌಡ ತಿಪ್ಪನಾಳ್, ಸಂಘದ ಜಿಲ್ಲಾ ಸಂಚಾಲಕ ಮಂಜುನಾಥ ಹೊಸ್ಕೇರಾ, ಪದಾಧಿಕಾರಿಗಳಾದ ಶಿವಕುಮಾರ ಮಾಲಿಪಾಟೀಲ್, ರೇವಣಪ್ಪ ಹಿರೇಮಠ, ಮಂಜುನಾಥ ಮಸ್ಕಿ, ರವಿ ತಿಮ್ಮಾಪುರ, ಶ್ರೀನಿವಾಸ ಕುಲ್ಕರ್ಣಿ, ಹನುಶಿಲ್ಪಿ, ರುದ್ರೇಶ, ವೀರೇಶ ಹಣವಾಳ್, ಉಮೇಶ, ಸುಮಂಗಲಾ ಇತರರಿದ್ದರು.