Scientific awareness is essential in children 
ಜಿಲ್ಲೆ

ಮಕ್ಕಳಲ್ಲಿ ವೈಜ್ಞಾನಿಕ ಅರಿವು ಅವಶ್ಯ

ರಬಕವಿ/ಬನಹಟ್ಟಿ: ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ವಿಜ್ಞಾನದ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕು ಎಂದು ನಿವೃತ್ತ ಶಿಕ್ಷಕ ಬಿ.ಕೆ. ಜಾನಕ್ಕಿ ತಿಳಿಸಿದರು.

ರಬಕವಿ ಪದ್ಮಾವತಿ ಅಂತಾರಾಷ್ಟ್ರೀಯ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಸಿ.ವಿ.ರಾಮನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಕ್ಕಳ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಮನ್ ಪರಿಣಾಮದ ಆವಿಷ್ಕಾರದ ಸ್ಮರಣಾರ್ಥ ೆ.28ರಂದು ಈ ದಿನವನ್ನು ಆಚರಿಸಲಾಗುತ್ತದೆ. 1986ರಲ್ಲಿ ಭಾರತ ಸರ್ಕಾರವು ೆ.28 ಅನ್ನು ರಾಷ್ಟ್ರೀಯ ವಿಜ್ಞಾನ ದಿನ ಎಂದು ಗೊತ್ತುಪಡಿಸಿತು. ಈ ದಿನದಂದು ಸಿವಿ ರಾಮನ್ ಅವರು ‘ರಾಮನ್ ಪರಿಣಾಮ’ದ ಆವಿಷ್ಕಾರ ಘೋಷಿಸಿದರು ಎಂದು ಜಾನಕ್ಕಿ ಹೇಳಿದರು.

ರಬಕವಿ ಬನಹಟ್ಟಿ ನ್ಯಾಯಾಲಯದ ದಿವಾಣಿ ಹಿರಿಯ ನ್ಯಾಯಾಧೀಶ ಆಶಪ್ಪ ಸಣಮನಿ ಮಾತನಾಡಿ, ಮಕ್ಕಳು ತಯಾರಿಸಿದ ಪ್ರತಿಯೊಂದು ವೈಜ್ಞಾನಿಕ ಪರಿಕರಿಗಳ ಕುರಿತು ವಿವರಿಸಿದ್ದು ಖುಷಿ ತಂದಿದೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಳನ್ನು ಕಲಿಕೆಯಡೆಗೆ ಪ್ರೇರೇಪಿಸುತ್ತವೆ ಎಂದರು.

ಶಿಕ್ಷಕ ಶ್ರೀಶೈಲ ಅಳಿಹಾಳ, ಶಿಕ್ಷಣ ಸಂಸ್ಥೆಯ ಆಢಳಿತಾಧಿಕಾರಿ ಭಾರತಿ ತಾಳಿಕೋಟಿ, ಪ್ರಾಚಾರ್ಯ ಬಸವರಾಜ ಕಲಾದಗಿ ಮಾತನಾಡಿದರು. ಸಂಸ್ಥೆಯ ಚೇರ್ಮನ್ ಸತೀಶ ಹಜಾರೆ, ಪದ್ಮಾವತಿ ಹಜಾರೆ ಇದ್ದರು.