ಜಿಲ್ಲೆ

ದೇಶದ ಬೆಳವಣಿಗೆ ವಿಜ್ಞಾನ- ತಂತ್ರಜ್ಞಾನ ಪೂರಕ

ಮಂಜುನಾಥ ಅಂಗಡಿ

ಧಾರವಾಡ: ದೇಶದ ಬೆಳವಣಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಪೂರಕ. ಉತ್ತರ ಕರ್ನಾಟಕದವರಾದ ನಮಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ವಿಜ್ಞಾನ ವಿಷಯದಲ್ಲಿ ಶಿಕ್ಷಕರ ಕೊರತೆ ಇದ್ದು, ಈಗಿರುವ ಶಿಕ್ಷಕರನ್ನು ಆಧುನಿಕವಾಗಿ ಗಟ್ಟಿಗೊಳಿಸಬೇಕು ಎಂದು ಆಂಧ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ವಿ. ಕಟ್ಟಿಮನಿ ಹೇಳಿದರು.
ನಗರದ ಕರ್ನಾಟಕ ವಿಶ್ವವಿದ್ಯಾಲಯದ ಮಾನಸೋಲ್ಲಾಸ ಸಭಾಂಗಣದಲ್ಲಿ ಡಾ. ಎಂ.ಐ. ಸವದತ್ತಿ ವಿದ್ಯಾವರ್ಧಕ ಸಂಸ್ಥೆಯಿAದ ಶುಕ್ರವಾರ ಆಯೋಜಿಸಿದ್ದ ಡಾ. ಎಂ.ಐ. ಸವದತ್ತಿ ಸ್ಮರಣ ಸಂಚಿಕೆ ಬಿಡುಗಡೆ ಮತ್ತು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಪ್ರೊ. ಎಸ್.ಎಂ. ಶಿವಪ್ರಸಾದ ಮಾತನಾಡಿ, ಒಬ್ಬ ಶಿಕ್ಷಕ ವಾಗ್ಮಿಯಾಗಿರಬೇಕು. ವಿದ್ವತ್ತು, ಸಹಾನುಭೂತಿ ಇರಬೇಕು ಇವೆಲ್ಲ ಗುಣಗಳು ಡಾ. ಸವದತ್ತಿ ಅವರಲ್ಲಿದ್ದವು ಎಂದರು.
ಬೆAಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಕೆ. ಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಗಜಾನನ ಮನ್ನಿಕೇರಿ, ಎಸ್.ಎಸ್. ಕೆಳದಿಮಠ, ದೀಪಕ ಸವದತ್ತಿ, ಪ್ರೊ. ಡಿ.ಸಿ. ಪಾಟೀಲ, ಮುಕ್ತಾ ಕಗಲಿ, ಸುಮಿತ್ರಾ ಸವದತ್ತಿ, ಪ್ರೊ. ಎಸ್.ಆರ್. ಇನಾಮದಾರ, ಸುರೇಶ ಸಾವಳಗಿ, ಇತರರಿದ್ದರು.