ಜಿಲ್ಲೆ

ಅಭಿವೃದ್ಧಿಗೆ ಅಗತ್ಯ ವಿಜ್ಞಾನ : ಪ್ರಕಾಶ್ ಪೌಲ್ ಡಿಸೋಜಾ ಹೇಳಿಕೆ

ಸೌಮ್ಯ ಆರ್

ಕಡಬ: ಕಡಬ ಸೇಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ವಿಜ್ಞಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸೈನ್ಸ್ ಕ್ಲಬ್ ವತಿಯಿಂದ ವಿಜ್ಞಾನ ಮಾದರಿ ಪ್ರದರ್ಶನ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಸಂಚಾಲಕ ಪ್ರಕಾಶ್ ಪೌಲ್ ಡಿಸೋಜಾ, ಪ್ರಸಕ್ತ ಕಾಲಘಟ್ಟದಲ್ಲಿ ಪ್ರತಿಯೊಬ್ಬರಿಗೆ ವಿಜ್ಞಾನದ ಅರಿವು ಅಗತ್ಯ. ಸಮಾಜದ ಅಭಿವೃದ್ಧಿಯಲ್ಲಿ ವಿಜ್ಞಾನ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ವಿಜ್ಞಾನದ ಜ್ಞಾನ ಬೆಳೆಸಿಕೊಂಡು ಹೊಸ ಅನ್ವೇಷಣೆಯಲ್ಲಿ ಆಸಕ್ತಿ ವಹಿಸಬೇಕು ಎಂದು ಹೇಳಿದರು.

ಸುಬ್ರಹ್ಮಣ್ಯ ಕುಮಾರಸ್ವಾಮಿ ಪಿ.ಯು.ಕಾಲೇಜು ಪ್ರಾಂಶುಪಾಲ ಡಾ.ಸಂಕೀರ್ತ್ ಹೆಬ್ಬಾರ್ ಉದ್ಘಾಟಿಸಿ, ವಿದ್ಯಾರ್ಥಿಗಳೊಂದಿಗೆ ವಿಜ್ಞಾನದ ಕುರಿತು ಸಂವಾದ ನಡೆಸಿದರು.

ಸಂಸ್ಥೆಯ ಪ್ರಾಂಶುಪಾಲ ಅಮಿತ್ ಪ್ರಕಾಶ್ ರೋಡ್ರಿಗಸ್, ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ದಕ್ಷ, ಸೈನ್ಸ್ ಕ್ಲಬ್ ಶಿಕ್ಷಕರಾದ ಆಶಾರಾಣಿ, ಫಿಲೋಮಿನ ಉಪಸ್ಥಿತರಿದ್ದರು. ಸೈನ್ಸ್ ಕ್ಲಬ್ ಸದಸ್ಯರಾದ ತೇಜಸ್ವಿನಿ ಸ್ವಾಗತಿಸಿದರು. ಪ್ರದೀಶ್ ವಂದಿಸಿದರು. ಯಶಿಕಾ, ಸಾನ್ವಿ ಕಾರ್ಯಕ್ರಮ ನಿರೂಪಿಸಿದರು.