ಜಿಲ್ಲೆ

ವಿಜ್ಞಾನ ವಿಭಾಗಕ್ಕೆ ಪ್ರವೇಶ ಪ್ರಾರಂಭ

Kopala - Desk - Eraveni

ಕೂಡ್ಲಿಗಿ: ಪದವಿಪೂರ್ವ ಕಾಲೇಜ್ ಅಗಿ ಉನ್ನತೀಕರಣವಾಗಿರುವ ತಾಲೂಕಿನ ಹಿರೇಹೆಗ್ಡಾಳ್ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ವಿಜ್ಞಾನ ವಿಭಾಗಕ್ಕೆ ಪ್ರವೇಶ ಆರಂಭವಾಗಿದ್ದು,

ಆಸಕ್ತ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು. ಪಿಸಿಎಂಬಿ ಹಾಗೂ ಪಿಸಿಎಂಸಿ ವಿಭಾಗಗಳಿದ್ದು, ಪ್ರತಿ ವಿಭಾಗದಲ್ಲಿ 40 ವಿದ್ಯಾರ್ಥಿನಿಯರ ಪ್ರವೇಶಕ್ಕೆ ಅವಕಾಶವಿದೆ. ವಿಜಯನಗರ ಜಿಲ್ಲೆಯವರಿಗೆ ಶೇ.75 ಹಾಗೂ ಹೊರ ಜಿಲ್ಲೆಯವರಿಗೆ ಶೇ.25 ಸ್ಥಾನ ಮೀಸಲಿರಿಸಲಾಗಿದೆ. ಆಸಕ್ತ ವಿದ್ಯಾರ್ಥಿನಿಯರು ಆ.13ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ಪ್ರಾಚಾರ್ಯೆ ಎಂ.ಶೋಭಾ ತಿಳಿಸಿದ್ದಾರೆ.