ಜಿಲ್ಲೆ

ಪ್ರೋತ್ಸಾಹದಿಂದ ಶಾಲೆ ಉಳಿಸಲು ಸಾಧ್ಯ

ಆರ್ಡಿ: ಸ್ಥಳೀಯರ ಪ್ರೋತ್ಸಾಹದಿಂದ ಊರ ಶಾಲೆ ಉಳಿಸಲು ಸಾಧ್ಯ ಎಂದು ಕೋಟೇಶ್ವರ ಗೀತಾ ಎಚ್.ಎಸ್.ಎನ್. ಫೌಂಡೇಶನ್ ಅಧ್ಯಕ್ಷ ಶಂಕರ್ ಐತಾಳ್ ಅಮಾಸೆಬೈಲು ಹೇಳಿದರು.

ಶೇಡಿಮನೆ ಅರಸಮ್ಮಕಾನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವದಲ್ಲಿ ಶನಿವಾರ ಮಾತನಾಡಿದರು. ಮಡಾಮಕ್ಕಿ ಗ್ರಾಪಂ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷೆ ಜ್ಯೋತಿ ಸತ್ಯನ್ ಅಧ್ಯಕ್ಷತೆ ವಹಿಸಿದರು. ಪ್ರಮುಖರಾದ ನಾಗರಾಜ ಬಾಯರಿ, ಎಸ್.ಜಯರಾಮ ಶೆಟ್ಟಿ ಸುರ‌್ಗೋಳಿ, ಮನೋಹರ ಹೆಗ್ಡೆ ನೂಜಟ್ಟು, ಸೀತಾರಾಮ ನಾಯಕ್ ನೂಜಟ್ಟು, ಅನೂಪ್‌ಕುಮಾರ್ ಶೆಟ್ಟಿ ಮೊದಲಾದವರಿದ್ದರು.

ಎನ್.ಭುಜಂಗ ಶೆಟ್ಟಿ ಕುದ್ರುಬೀಡು ಸ್ಮಾರಕ ರಂಗಮಂದಿರದಲ್ಲಿ ನಡೆದ ವಾರ್ಷಿಕೋತ್ಸವದಲ್ಲಿ ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ ಹೆಗ್ಡೆ, ವಾಸುದೇವ ನಕ್ಷತ್ರಿ, ಎಸ್‌ಡಿಎಂಸಿ ಅಧ್ಯಕ್ಷೆ ಜ್ಯೋತಿ ಸತ್ಯನ್, ವಿದ್ಯಾರ್ಥಿ ನಾಯಕಿ ಪಲ್ಲವಿ, ಪ್ರಮುಖರಾದ ಬೇಬಿ ಹೆಗ್ಗಡ್ತಿ, ಸದಾನಂದ ಪೂಜಾರಿ, ಜಯಲಕ್ಷ್ಮೀ, ರತಿ ಕುಲಾಲ್, ಸುಶೀಲಾ ಪೂಜಾರಿ, ಗಣೇಶ್‌ಕುಮಾರ್ ಶೆಟ್ಟಿ, ಶೇಖರ್ ಯು, ಚಂದ್ರಶೇಖರ್ ಶೆಟ್ಟಿ ಮೂಡುಬೈಲು ಉಪಸ್ಥಿತರಿದ್ದರು.

ಯಡ್ತಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಶ್ರೀನಿವಾಸ ಕೋಡಿ, ಹೆಜಮಾಡಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ವಿನೂತ ಕುಮಾರಿ ಯು. ಅವರನ್ನು ಸನ್ಮಾನಿಸಲಾಯಿತು. ಪ್ರಶಾಂತ ಹೆಗ್ಡೆ ಸ್ವಾಗತಿಸಿದರು. ಪ್ರಭಾರ ಮುಖ್ಯ ಶಿಕ್ಷಕ ಶ್ರೀಕಾಂತ್ ಆಚಾರ್ ವರದಿ ವಾಚಿಸಿದರು. ಶಿಕ್ಷಕಿ ಉಷಾಲತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಶಶಿಧರ ಶೆಟ್ಟಿ, ರಮ್ಯಾ ಕಾರ್ಯಕ್ರಮ ನಿರೂಪಿಸಿದರು. ನವ್ಯಾ ಶೆಟ್ಟಿ ವಂದಿಸಿದರು.