ಜಿಲ್ಲೆ

ಶಾಲೆ ವಾಹನ ಸ್ಕೂಟರ್ ನಡುವೆ ಡಿಕ್ಕಿ, ಸ್ಕೂಟರ್ ಸವಾರ ಸಾವು

ಬೇಲೂರು : ಬೇಲೂರು ತಾಲೂಕಿನ ನಿಡಗೋಡು ಸಮೀಪ ಸೋಮವಾರ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಶಾಲೆಯ ಮಿನಿಬಸ್ ಹಾಗೂ ಸ್ಕೂಟರ್ ನಡುವೆ ಮುಖಾಮುಖಿ ಸಂಭವಿಸಿ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟರೆ, ಬಸ್ಸಿನಲ್ಲಿ ಇದ್ದ ಒಂದೆರಡು ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿದೆ. ಬೇಲೂರು ಪಟ್ಟಣದ ಚನ್ನಕೇಶವ ನಗರದ ನಿವಾಸಿ ನಾಗೇಂದ್ರ (51) ಮೃತ.


ಶಾಲೆ ಮುಗಿಸಿದ ಮಕ್ಕಳನ್ನು ಮಿನಿ ಬಸ್‌ನಲ್ಲಿ ಕೂರಿಸಿಕೊಂಡು ಅವರ ಊರುಗಳಿಗೆ ಬಿಡಲು ನೀಡಗೋಡು ಗ್ರಾಮದ ಸಮೀಪ ತೆರಳುತಿದ್ದ ಮಿನಿ ಬಸ್‌ಗೆ, ಕೆಲಸ ಮುಗಿಸಿ ಮನೆಗೆ ಮೂಡಿಗೆರೆ ರಸ್ತೆಯಿಂದ ಬರುತ್ತಿದ್ದ ಸಂದರ್ಭದಲ್ಲಿ ಅಪಘಾತವಾಗಿದೆ.


ಮೃತರಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸೀಲಿಸಿದರು. ಈ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.